ಸಾಮಾಜಿಕ ಬದುಕಿನ ಚಿಂತನೆಯನ್ನು ಒಳಗೊಂಡ ಕಣವಿಯವರ ಕವಿತೆಗಳ ಸಂಕಲನ 'ನಗರದಲ್ಲಿ ನೆರಳು'. 1974ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಸಂಕಲನದಲ್ಲಿ 31ಕವಿತೆಗಳಿವೆ. ಪರಿಸರ ಪ್ರಜ್ಞೆಯಿಲ್ಲದೆ ಬೆಳೆಯುತ್ತಿರುವ ನಗರಗಳ ದಾರುಣ ಸ್ಥಿತಿಯನ್ನು ಕವಿ ವಿಡಂಬಿಸಿದ್ದಾರೆ. ಜನಸಂಖ್ಯೆ ಹೆಚ್ಚುತ್ತಿರುವುದರ ಚಿಂತನೆಯಿದೆ.
ಸಮಕಾಲೀನ ಬದುಕಿಗೆ ಸ್ಪಂದಿಸುವ ಅನೇಕ ಕವಿತೆಗಳನ್ನು ರಚಿಸಿರುವ ಕಣವಿಯವರು ಭಾರತದಲ್ಲಿ ಈಗ ಯಾರು ಯಾರಿಗೆ ಹೇಳಬೇಕು ? ಹಾಗೆಯೇ 'ಯಾರು ಕೇಳುತ್ತಾರೆ ಹೇಳಿರಣ್ಣ' ವೈಯಕ್ತಿಕ ಪ್ರತಿಷ್ಠೆ, ಆಡಂಬರದ ಸ್ವಾರ್ಥಗಳಿಂದ ಕೂಡಿದ ದೇಶದ ವ್ಯವಸ್ಥೆ ಹದ ತಪ್ಪಿರುವುದನ್ನು ಸಮರ್ಥವಾಗಿ ಸೆರೆಹಿಡಿದಿದ್ದಾರೆ.
ಮೇಜು ಗುದ್ದುತ್ತಾರೆ, ಮೈಕು ಮುರಿಯುತ್ತಾರೆ
ಮಾಲೆ ಬೇಡುತ್ತಾರೆ, ಮೋಜು ಮಾಡುತ್ತಾರೆ ,
ಯಾರು ಕೇಳುತ್ತಾರೆ ಹೇಳಿರಣ್ಣ.
ಫಂಡು ಎತ್ತುತ್ತಾರೆ, ಎತ್ತಿ ಹಾಕುತ್ತಾರೆ
ಬಂಡು ಹೂಡುತ್ತಾರೆ, ಬೆಂಡು ಸುಲಿಯುತ್ತಾರೆ
ಯಾರು ಕೇಳುತ್ತಾರೆ ಹೇಳಿರಣ್ಣ.
ಕೈಯ ಮುಗಿಯುತ್ತಾರೆ, ಕಾಲು ಕೆದರುತ್ತಾರೆ
ಬಾಲ ಹಿಡಿಯುತ್ತಾರೆ, ಮೇಲೆ ಏರುತ್ತಾರೆ
ಯಾರು ಕೇಳುತ್ತಾರೆ ಹೇಳಿರಣ್ಣ.
(ಯಾರು ಕೇಳುತ್ತಾರೆ ಹೇಳಿರಣ್ಣ)
©2024 Book Brahma Private Limited.