ಮೂರ್ತಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

₹ 25.00




Year of Publication: 2009
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಮೂರ್ತಿ ಮತ್ತು ಕಾಮಕಸ್ತೂರಿ ಮೂರ್ತಿ ಮತ್ತು ಕಾಮಕಸ್ತೂರಿ ಇದು ಎರಡು ಬಾಗಗಳಲ್ಲಿ ವಿಂಗಡಿಸಲಾದ ಕವನಸಂಕಲನ. ಮೊದಲ ಭಾಗದಲ್ಲಿ ಮೂರ್ತಿ ಎಂದು ಕರೆದಿರುವ ಬೇದ್ರೆಯವರು ಅದರಲ್ಲಿ ೧೧ ಕವಿತೆಗಳನ್ನು ನೀಡಿದ್ದಾರೆ. ಎರಡನೆಯ ಕಾಮಕಸ್ತೂರಿ ಭಾಗದಲ್ಲಿ ೧೫ ಕವಿತೆಗಳಿವೆ. ಬೇಂದ್ರೆಯವರು ೧೯೨೪ರಲ್ಲಿ ತತ್ವಚಿಂತನು ನಡೆಸುವಾಗ ’ಆತ್ಮವು ಒಂದು ಕಲ್ಲು, ಬರಿ ಉಂಟು’ ಎನಿಸಿತಂತೆ. ನಂತರ ಸಾಂಖ್ಯಯೋಗದ ಕುರಿತು ಓದುವಾಗ ಕೈವಲ್ಯಭೋಧ ವಿಚಾರದಲ್ಲಿ ದೃಷವದತ್ತ ಡಂಬ ಮಾತು ಬಂತು.”ಮತ್ತೊಮ್ಮೆ ಇತಿಹಾಸ ದರ್ಶನ ಅವಲೋಕಿಸುವಾಗ ಮಾನವಮೂರ್ತಿಯ ವೈಭವವೆಲ್ಲಾ,ಯಾರದೋ ಕನಸು, ಯಾರದೋ ಕಲೆ,ಯಾರದೋ ಭಾವ,ಏನೋ ಲೇಲೆ, ಎಂದು ದ್ವನಿತವಾಯಿತು.ನನ್ನದೂ ಹಾಗೇ ಅಲ್ಲವೇ ಎಂದು ತೋಚಿತು. ಬಾಳಿನ ಒಳಗತೆಯ ಚಿರಂತನ ಚಿತ್ರ ಈ ಮೂರ್ತಿ ಚಿಂತನೆ ಎಂದು ಬೇಂದ್ರೆ ಹೇಳುತ್ತಾರೆ. ಅದಾದ ಮೇಲೆ ೧೯೨೮ ರಲ್ಲಿ ಬೇಂದ್ರೆಯವರು ಗೆಳೆಯ ಗೋಕಾಖರೊಡನೆ ಚರ್ಚೆ ನಡೆಸುವಾಗ ಈ ದೃಷ್ಟಾಂತವನ್ನು ಹೇಳಿದರಂತೆ. ಗೋಕಾಖರು ೧೯೩೧ರಲ್ಲಿ ಒಂದು ಕವನ ರಚನೆ ಅದನ್ನು ಕಹಿಯಾಗಿ ನೋಡಿದರು.ಅದನ್ನು ಗಮನಿಸಿದ ಬೇಂದ್ರೆಯವರಿಗೆ “ನವರಸ ರುಚಿಯಾದ ಈ ರೂಪ ಹೀಗೆ ಮೂಡಬಹುದೇ ಎಂದು ಅನ್ನಿಸಿ ಅದೇ ವರ್ಷ ಮೇ ತಿಂಗಳಲ್ಲಿ ಒಳಹು ಹಾಕಿ ೫ಭಾಗ ಬರೆದರು. ಒಂದು ಭಾಗ ಗರಿಯಲ್ಲಿ ಪ್ರಕಟವಾಯಿತು.ಜೈ ಕರ್ನಾಟಕ ಪತ್ರಿಕೆಗೆ ಸಂಬಂದಿಸಿದಂತೆ ಕೋಲಾಹಲ ಉಂಟಾಗಿ ಗೆಳೆಯರ ಗುಂಪು ಕೊನೆಗೊಂಡಾಗ ಬರೆದ ೪ಭಾಗಗಳಿವು.೩೩ರಲ್ಲಿ ಇದನ್ನು ಪ್ರಕಟಣೆಗೆ ಸಿದ್ದಪಡಿಸುವಾಗ ಅಲ್ಲಲ್ಲಿ ೮-೧೦ ಸಾಲು ಸೇರಿಸಿದ್ದಾರೆ. ಮೊದಲ ಮತ್ತು ಕೊನೆಯ ಕವನಗಳು ಅಷ್ಟಷಟ್ಪದಿಗಳು. ಕವನದ ಮೊದಲ ಭಾಗವಾದ ಅಚಿಂತ್ಯ ವು ರೂಪತಾನ್ಯೋಕ್ತಿಯ ತತ್ವಮುಖವಾಗಿದೆ. ಕೊನೆಯ ಹಾಡು ಭಾವಫಲ.ಅಚಿಂತ್ಯ ರಿತಿಯಲ್ಲಿ ಸಂವೇದನಾಗಮ್ಯವಾದುದು. ರಸವೇಜನನ, ವಿರಸವೇ ಮರಣ, ಸಮರಸವೇ ಜೀವನ ಎಂದಿದ್ದಾರೆ. ಕಾಮಕಸ್ತೂರಿಯನ್ನು ಬೇದ್ರೆಯವರು ಪ್ರಣಯ ಪ್ರಣಾಲಿಯ ಲಹರಿ ಎಂದು ಕರೆದಿದ್ದಾರೆ. ಇವು ಒಂದೇ ಕಾಲಕ್ಕೆ ಬರೆದ ಕವಿತೆಗಳಲ್ಲ ಎಂದ ಕವಿ ಒಂದೇ ತರಂಗ ಲಹರಿಯಲ್ಲಿ ಬರುವ ಜಾತಿಯವು ಎಂದಿದ್ದಾರೆ. “ಕಾಮವೂ ಕಸ್ತೂರಿಯಂತೆ ಒಕ್ಕಾಲು ಮದ ಮಕ್ಕಾಲು ಮಣ್ಣು” ಆದರೂ ಮಘ ಮಘಿಸುವ ಸವಿಗಂಪು. ಕಾಮ-ಪ್ರೇಮ, ಕೆಸರು ಕಮಲ ಇದ್ದಂತೆ. ಒಂದು ವಾಚ್ಯ,ಒಂದು ಧ್ವನಿ- ಕಾವ್ಯದ ಭಾಚೆಯಲ್ಲಿ ಎಂದಿದ್ದಾರೆ ಕವಿ. ಎಕತಾರೆಯ ಜೊತೆಗೆ ಹಾಡಬಹುದಾದ ಕವಿತೆಗಳಿವೆ ಎಂದಿರುವ ಕವಿ ಇವು ಅನುಭಾವ ಪದಗಳಲ್ಲ.ಪ್ರಾಯ ಮೀರಿದವರಿಗೆ ಹೊಸದೇನ? ಎಲ್ಲರಿಗೂ ಒಂದಿಲ್ಲ ಒಂದು ರೀತಿಯಲ್ಲಿ ರುಚಿಸುತ್ತದೆ ಎಂದಿದ್ದಾರೆ

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books