ಕಣವಿಯವರ ಆರನೆಯ ಸಂಕಲನವಾದ ’ಮಣ್ಣಿನ ಮೆರವಣಿಗೆ’ಯು ಅವರ ಕಾವ್ಯದ ದಾರಿ ಬದಲಾದದ್ದನ್ನು ಸ್ಪಷ್ಟವಾಗಿ ದಾಖಲಿಸುತ್ತದೆ. ನವ್ಯತೆಯ ಆವಿಷ್ಕಾರ ಕಣವಿಯವರಿಗೆ ಈ ಸಂಕಲನದಲ್ಲಿ ಸಾಧ್ಯವಾಗಿದೆ. ಕಣವಿಯವರು ಈ ಸಂಕಲನದಲ್ಲಿ ಅಭಿವ್ಯಕ್ತಿಯಲ್ಲಿ ಹೊಸತನ ಸಾಧಿಸಿದ್ದಾರೆ. ಈ ಸಂಕಲನದಲ್ಲಿ 9 ಕವಿತೆಗಳಿವೆ.
ಎರಡು ಮಹಾಯುದ್ಧಗಳ ನಂತರ ಜಗತ್ತಿಗೆ ಆವರಿಸಿದ ಹತಾಶೆ, ನೋವು ಯಾತನೆ, ಮಾನವ ಕುಲದ ಸಂಕಟ, ಅಸಹಾಯಕತೆಗಳನ್ನು ಈ ಸಂಕಲನದ ಕವಿತೆಗಳು ಕಟ್ಟಿಕೊಡುತ್ತವೆ. ವಾಸ್ತವ ಬದುಕಿಗೆ ಸ್ಪಂದಿಸುವ ಕವಿ ಅದನ್ನು ಎಚ್ಚರದಿಂದ ಕಟ್ಟಿಕೊಟ್ಟದ್ದು ವಿಶೇಷ.
©2024 Book Brahma Private Limited.