ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಪ್ರಜ್ಞೆ ಈ ಕೃತಿಯ ಲೋಕದರ್ಶನ. ದಲಿತ ಲೋಕದ ಬಕಾಲ, ಜಾಂಬವ, ದಕ್ಲಕಥಾದೇವಿ ಹೀಗೆ ಅನಾದಿ ಮೂಲದ ಈ ಮಹಾ ಪಾತ್ರಗಳನ್ನು ನೆಪವಾಗಿಟ್ಟುಕೊಂಡು ಅವರ ದನಿ ಸಂವೇದನೆಯಾಗಿ, ಇಡೀ ದಲಿತ ಸಮುದಾಯಗಳ ಬದುಕಿನ ಜೀವ ನೋವುಗಳಿಗೆ ನುಡಿಗೊಟ್ಟಿದ್ದಾರೆ. ಹೀಗೆ ನುಡಿ ಕೊಡುವಾಗ ಆ ಎಲ್ಲ ಜೀವಗಳ ಎದೆಯೊಳಗಿನ ತಾಯಿಭಾವ ಮಾತನಾಡಿದೆ. ಹಿರಿಯ ಕವಿ ಕೆ.ಬಿ. ಸಿದ್ದಯ್ಯನವರ ನಾಲ್ಕು ಖಂಡಕಾವ್ಯಗಳಲ್ಲಿ ಜೀವವಾಹಿನಿಯಾಗಿ ಹರಿದಿರುವ ಕಾವ್ಯಸತ್ಯ ಕಾವ್ಯಸತ್ವವಿದು. ಖಂಡಕಾವ್ಯಗಳಲ್ಲಿ ದಲಿತಲೋಕದ ರೂಪಕ ಪ್ರತಿಮೆಗಳು ಇಡುಕಿರಿದು ಬರುವಂತೆಯೇ ಬೌದ್ಧಧರ್ಮದ ಪಾರಿಭಾಷಿಕ ದರ್ಶನ ದೀಪ್ತಿಗಳು ಕೂಡ ಈ ಕೃತಿಯಲ್ಲಿ ಸಹಜವಾಗಿ ಮೂಡಿಬಂದಿದೆ.
©2024 Book Brahma Private Limited.