ಕವಿ ಕಾವ್ಯ ಪರಂಪರೆ ಜನ್ನ

Author : ವಿ. ಸೀತಾರಾಮಯ್ಯ

Pages 199

₹ 100.00




Year of Publication: 2012
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಖ್ಯಾತ ಸಾಹಿತಿ ಡಾ. ವಿ. ಸೀತಾರಾಮಯ್ಯ ಅವರು ಸಂಪಾದಿಸಿದ ಕೃತಿ-ಕವಿ ಕಾವ್ಯ ಪರಂಪರೆ ಜನ್ನ. ಕವಿ ಜನ್ನನು ಕನ್ನಡದ ಪ್ರಾಚೀನ ಸಾಹಿತ್ಯದಲ್ಲಿ ಪ್ರಸಿದ್ಧನು. 12ನೇ ಶತಮಾನದ ಜೈನ ಕವಿ. ಸಿಂದಗಿ ತಾಲೂಕಿನ ಕೊಂಡಗೂಳಿಯವನು. ಜನ್ನನ ಆಧ್ಯಾತ್ಮಿಕ ಗುರು ಮಕಾಶಿ. ಅನುಭವ ಮುಕುರವೆಂಬುದು ಕಾಮಶಾಸ್ತ್ರ ಸಂಬಂಧಿ ಬರೆದ ಕೃತಿ. ಯಶೋಧರ ಚರಿತೆ, ಅನಂತನಾಥಪುರಾಣ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ.. ಕೆಲವು ಶಾಸನಗಳನ್ನು ರಚಿಸಿದ್ದಾನೆ. ಕವಿ ಜನ್ನನ ಕಾವ್ಯ, ಹಾಗೂ ಪ್ರಾಚೀನ ಕಾವ್ಯ ಪರಂಪರೆಗೆ ಈತನ ಕೊಡುಗೆ ಇತ್ಯಾದಿ ಅಂಶಗಳನ್ನು ಸಂಪಾದಿಸಿದ ಕೃತಿ ಇದು.

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Related Books