ಬಸವಣ್ಣನವರ ವಚನಗಳ ಕುರಿತು ಯಥೇಚ್ಛವಾಗಿ ಟೀಕಾ ಸಾಹಿತ್ಯ ಲಭ್ಯವಿದೆ. ಇದಕ್ಕೆ ಕಾರಣ ಅವರ ಜನಪ್ರಿಯತೆ. ಅವರ ಬಗೆಗೆ ಒಟ್ಟು ಐದು ಟೀಕಾ ಕೃತಿಗಳು ಲಭ್ಯವಿದ್ದು ಅದರಲ್ಲಿ ಒಂದು ಟೀಕುವಿನ ರಚನೆಕಾರನ ವಿವರಗಳು ದೊರೆತಿಲ್ಲ. ಶ್ರೀಗುರು ಬಸವರಾಜದೇವರು ನಿರೂಪಿಸಿದ ಷಟ್ಸ್ಥಲದ ವಚನವ್ಯಾಖ್ಯಾನ', ಸೋಮಶೇಖರ ಶಿವಯೋಗಿಯ ಬಸವರಾಜ ದೇವರ ಷಟ್ಸ್ಥಲದ ಬೆಡಗಿನ ಟೀಕು, ಗುರುಬಸವರಾಜದೇವನ ಬಸವ ವಚನ ಸಾರಾಮೃತ, ಪರ್ವತ ಶಿವಯೋಗಿಯ ಬಸವೇಶ್ವರ ದೇವರ ವಚನ ಸಾರಾರ್ಥ ಇವು ಉಳಿದ ಟೀಕುಗಳು.
ಟೀಕಿನ ವಚನಗಳು ಹುಟ್ಟಿದ ಹಿನ್ನೆಲೆ, ಸ್ವರೂಪ, ಮಿತಿಗಳು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅವುಗಳಿಂದಾಗುವ ಉಪಯೋಗ ಕುರಿತು ಈ ಎರಡೂ ಸಂಪುಟಗಳಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.