ಕನ್ನಡ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಅದರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಜೀವನ ಮೌಲ್ಯವನ್ನು ಎತ್ತಿಹಿಡಿದವರಲ್ಲಿ ಜೈನಕವಿಗಳು ಮೊದಲನೆಯವರಾಗಿರುತ್ತಾರೆ. ಜನಸಾಮಾನ್ಯರಲ್ಲಿ ಧರ್ಮಜಾಗೃತಿ ಮತ್ತು ಜೀವನ ಮೌಲ್ಯ ಪ್ರಸಾರಕ್ಕಾಗಿ ಜೈನಕವಿಗಳು ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಇಂತಹ ಸರಳ ಹಾಗೂ ಜನಪ್ರಿಯ ಮಾದರಿಯ ಸಾಂಸ್ಕೃತಿಕ ಆಶಯಗಳನ್ನು ಹೊಂದಿರುವ ಜೈನ ಹಾಡುಗಳನ್ನು ಆಯ್ದು ಈ ಗ್ರಂಥದಲ್ಲಿ ಸಂಪಾದಿಸಿ ಕೊಡಲಾಗಿದೆ. ಈ ಗ್ರಂಥವು ಹೊಂದಿರುವ ವಿವಿಧ ಭಾಗಗಳು ಇಂತಿವೆ: ರತ್ನಾಕರನ ಹಾಡುಗಳು,ತೀರ್ಥಂಕರ ಹಾಡುಗಳು,ಯಕ್ಷಿಣಿಯರ ಹಾಡುಗಳು , ಜೋಗುಳ ಹಾಡುಗಳು , ಶೋಭಾನದ ಹಾಡುಗಳು ,ಮಂಗಳಾರತಿಯ ಹಾಡುಗಳು , ಸಂಕೀರ್ಣ ಹಾಡುಗಳು
©2025 Book Brahma Private Limited.