ಮಲ್ಲಯ್ಯ, ಮಲ್ಲಣ್ಣ, ಗುಡದಯ್ಯ, ಮಲ್ಹಾರಿ, ಖಂಡೋಬಾ, ಮುಲ್ಲುಖಾನ್, ಅಜಮುತಖಾನ್ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಮೈಲಾರಲಿಂಗನ ಮುಖ್ಯನೆಲೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ. ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲೂ ಮೈಲಾರಲಿಂಗ ಭಕ್ತರಿದ್ದಾರೆ. ಕುರುಬ ಸಮುದಾಯದ ಪ್ರಮುಖ ಆರಾಧ್ಯ ದೈವವಾಗಿರುವ ಮೈಲಾರಲಿಂಗನ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನೂ ಜಿಜ್ಞಾಸೆಗೊಳಪಡಿಸುತ್ತದೆ. ಮೈಲಾರಲಿಂಗ ಪರಂಪರೆಯಲ್ಲಿ ಕಾವ್ಯ–ಪುರಾಣ, ಕಲೆ ವಾಸ್ತುಶಿಲ್ಪ, ಜಾತ್ರೆ ಉತ್ಸವ, ಪಂಥ, ಪ್ರಭಾವ ಪರಂಪರೆ, ಬಳ್ಳಾರಿ ಪರಿಸರದ ಕುರುಬರ ಸಂಸ್ಕೃತಿಯ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.
©2025 Book Brahma Private Limited.