ವಿಕ್ರಮಾಂಕದೇವಚರಿತದ ಋತುವರ್ಣನೆ 

Author : ಅರವಿಂದ ಚಂದ್ರಕಾಂತ ಶ್ಯಾನಭಾಗ

Pages 30

₹ 50.00




Year of Publication: 2014
Published by: ಸರ್ವೋತ್ತಮ ಪ್ರಕಾಶನ 
Address: ಕೋಡ್ಕಣಿ ಅಂಚೆ, ಕುಮಟಾ ತಾಲೂಕು, ಉತ್ತರಕನ್ನಡ ಜಿಲ್ಲೆ-581440
Phone: 08880202206

Synopsys

11 ನೇ ಶತಮಾನದಲ್ಲಿದ್ದ ಕಾಶ್ಮೀರಿ ಸಂಸ್ಕೃತ ಮಹಾಕವಿ ಬಿಲ್ಹಣನು ಬರೆದಿರುವ ವಿಕ್ರಮಾಂಕದೇವಚರಿತ ಮಹಾಕಾವ್ಯದಿಂದ ಆರು ಋತುಗಳಿಗೆ ಸಂಬಂಧಪಟ್ಟ ಶ್ಲೋಕಗಳೊಂದಿಗೆ ಕನ್ನಡಕ್ಕೆ ತರುವ ಪ್ರಯತ್ನ ಈ ಪುಸ್ತಕದ ಮೂಲಕ ಆಗಿದೆ. ಕರ್ನಾಟಕವನ್ನಾಳಿದ ರಾಜವಂಶವಾದ ಕಲ್ಯಾಣಿ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದು ಬಿಲ್ಹಣನು ಬರೆದ ಪುಸ್ತಕವೇ ವಿಕ್ರಮಾಂಕದೇವಚರಿತ. ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ, ಶಿಶಿರ ಋತುಗಳ ವರ್ಣನೆ ಹೃದಯಂಗಮವಾಗಿ ಮೂಡಿಬಂದಿದೆ. ಸಂಸ್ಕೃತದಿಂದ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. 

 

About the Author

ಅರವಿಂದ ಚಂದ್ರಕಾಂತ ಶ್ಯಾನಭಾಗ
(05 March 1982)

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಎಂ.ಎ. ಪಡೆದಿದ್ದು, ಪಿಎಚ್ ಡಿ ಪದವೀಧರರು- ಅರವಿಂದ ಚಂದ್ರಕಾಂತ ಶ್ಯಾನಭಾಗ, ಗಾಂಧಿ ಅಧ್ಯಯನ ಮತ್ತು ಜೈನಶಾಸ್ತ್ರ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಇವರು ಹವ್ಯಾಸಿ ಬರಹಗಾರರು. ಈವರೆಗೆ ಕನ್ನಡ ಮತ್ತು ಕೊಂಕಣಿಯಲ್ಲಿ 9 ಪುಸ್ತಕಗಳನ್ನು ಪ್ರಕಟಿಸಿದ್ದು, 300 ಕ್ಕೂ ಹೆಚ್ಚು ಲೇಖನಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಿಜಯಪುರ, ಧಾರವಾಡ, ಮಂಗಳೂರು ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಿಂದ ಇವರ ಚಿಂತನ, ಭಾಷಣ ಮತ್ತು ಸಂಸ್ಕ್ರತ ಪಾಠ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಕರಾವಳಿ ಮುಂಜಾವು ಮತ್ತು ಕನ್ನಡ ಜನಾಂತರಂಗ ದಿನಪತ್ರಿಕೆಗಳಲ್ಲಿ ...

READ MORE

Related Books