ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥ ಮಾಲೆಯಡಿ ಪ್ರಕಟಿತ ಕೃತಿ-ಪ್ರಭುಲಿಂಗ ಲೀಲೆಯ ಸಂಗ್ರಹ. ಎಂ.ಎಸ್. ಬಸವಲಿಂಗಯ್ಯ ಹಾಗೂ ಎಂ.ಆರ್. ಶ್ರೀನಿವಾಸ ಮೂರ್ತಿ ಈ ಕೃತಿಯ ಸಂಪಾದಕರು. ಬಿ.ಎಂ.ಶ್ರೀಕಂಠಯ್ಯ ಪ್ರಧಾನ ಸಂಪಾದಕರು. ವಿಷಯ ಸಂಯೋಜನೆ, ಕಥಾ ರಚನೆಯ ಕೌಶಲ್ಯ, ಉತ್ತಮ ಶ್ರೇಣಿಯ ಪಾತ್ರ ನಿರೂಪಣೆ, ಸಹಜ ಸರಳ ರೀತಿಯ ಬರೆಹ ಶೈಲಿ, ಉತ್ಕೃಷ್ಟವಾದ ಕವಿತಾ ಮಾರ್ಗ-ಇವು ಚಾಮರಸ ಕವಿಯ ಪ್ರಭುಲಿಂಗ ಲೇಲಿಯಲ್ಲಿ ಕಾಣ ಬರುವ ಅಂಶಗಳು.
ಈ ಕಾವ್ಯದಲ್ಲಿ ಸಿದ್ಧಾಂತ ಬೋಧೆ ಇದೆ. ಧರ್ಮೋಪದೇಶವೂ ಇದೆ. ಕಾವ್ಯ ಸೌಂದರ್ಯವೂ ಇದೆ. ಪಾರ್ವತಿಯ ಪ್ರಜ್ಞೆ, ಮಹಾದೇವಿಯ ಬಾಲ್ಯ, ಅಲ್ಲಮನ ವೃತ್ತಾಂತ, ಮಾಯೆಯ ತಿರಸ್ಕಾರ, ಮಹಾದೇವಿಯಕ್ಕಳ ವಿರಕ್ತಿ, ಮುಕ್ತಾಯಕ್ಕನಿಗೆ ಉಪದೇಶ, ಶೂನ್ಯ ಸಿಂಹಾರೋಹಣ, ಪಾರ್ವತಿಯ ಪ್ರಸನ್ನತೆ ಹೀಗೆ ವಿದ್ವತ್ ಪೂರ್ಣವಾದ ಒಟ್ಟು 15 ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.