ಕನ್ನಡದ ಹಳೆಯ ಕಾವ್ಯ ಗ್ರಂಥಗಳನ್ನು ಪರಿಶೀಲಿಸಿ, ಸಂಗ್ರಹಿಸಿ, ಸಂಪಾದಿಸುವ ಮೈಸೂರು ವಿಶ್ವವಿದ್ಯಾಲಯ ಸಂಕಲ್ಪದ ಅನುಗುಣವಾಗಿ ತೀ.ನಂ. ಶ್ರೀಕಂಠಯ್ಯ ಪ್ರಧಾನ ಸಂಪಾದಕತ್ವದಡಿ ಪ್ರೊ. ಟಿ.ಎಸ್.ವೆಂಕಣ್ಣಯ್ಯ ಹಾಗೂ ಎ.ಆರ್. ಕೃಷ್ಣಶಾಸ್ತ್ರಿ ಅವರು ಸಂಪಾದಿಸಿದ ಕೃತಿಯೇ-ಹರಿಶ್ಚಂದ್ರ ಕಾವ್ಯ ಸಂಗ್ರಹ.’ ರಾಘವಾಂಕನು ಬರೆದ ಈ ಕೃತಿಯನ್ನು ಸಂಪಾದಿಸಲಾಗಿದೆ. ಸಿದ್ಧರಾಮ ಪುರಾಣ, ಸೋಮನಾಥ ಚರಿತೆ ಹೀಗೆ ಈ ಕವಿಯು ಬೇರೆ ಬೇರೆ ಕೃತಿಗಳನ್ನು ಬರೆದಿದ್ದು, ಈತನ ಹರಿಶ್ಚಂದ್ರ ಕಾವ್ಯ, ಕಾವ್ಯಾಂಶದಿಂದ ಮಹತ್ವದ್ದು ಎನಿಸಿದೆ. ರಾಘವಾಂಕನ ಜನನ, ಬಾಲ್ಯ ಸಮೇತ ಆತನ ಕೃತಿಗಳ ಸವಿವರವಾದ ಪೀಠಿಕೆಯೊಂದಿಗೆ ಕೃತಿಯನ್ನು ವಿಷಯ ಸಮೃದ್ಧವನ್ನಾಗಿಸಿದೆ.
©2024 Book Brahma Private Limited.