ಖ್ಯಾತ ಸಾಹಿತಿ -ಅನುವಾದಕ ಡಾ. ಎಸ್. ವಿದ್ಯಾಶಂಕರ ಅವರು ಸಂಪಾದಿಸಿದ ಕೃತಿ-ಮಹಾಕವಿ ಷಡಕ್ಷರಿದೇವನ ಬಸವರಾಜ ವಿಜಯ. ಈತನು ಕ್ರಿ.ಶ.1650ರ ಆಸುಪಾಸಿನಲ್ಲಿ ಜೀವಿಸಿದ್ದನು. ಮಂಡ್ಯಜಿಲ್ಲೆಯ ಮಳವಳ್ಳಿ ತಾಲೂಕಿನ ದನಗೂರು ಗ್ರಾಮದಲ್ಲಿ ಜನಿಸಿದ್ದು, ಸಂಸ್ಕೃತ -ಕನ್ನಡ ಪಾಂಡಿತ್ಯದೊಂದಿಗೆ ರಾಜಗೌರವಕ್ಕೆ ಪಾತ್ರನಾಗಿದ್ದ. ಮಾತ್ರವಲ್ಲ; ಈ ಕವಿ ಯಳಂದೂರು ಮಠದ ಮಠಾದಿಪತಿಯಾಗಿದ್ದರು. ಈ ಮಠದಲ್ಲಿ ಅವರ ಸಮಾಧಿ ಇದೆ. ಷಡಕ್ಷರದೇವನ ಅಲಂಕಾರ ಶೈಲಿ ‘ಉತ್ಪ್ರೆಕ್ಷೆ’ಗೆ ಹೆಸರುವಾಸಿ. ಈತನ ಕಾವ್ಯವೂ ಮಧುರವಾಗಿದ್ದು, ಐಹಿಕ ಹಾಗೂ ಪಾರಲೌಕಿಕ ದೃಷ್ಟಿಯಿಂದ ಕೂಡಿದೆ. ಸಂಸ್ಕೃತದಲ್ಲಿ ರಸವತ್ ಮಹಾಕಾವ್ಯ ಎಂಬ ಎರಡು ಲಘುಕಾವ್ಯಗಳನ್ನು, ಹಲವಾರು ಸ್ತೋತ್ರ ಕಾವ್ಯಗಳನ್ನು ಹಾಗೂ ಕನ್ನಡದಲ್ಲಿ ಸಂಸ್ಕೃತಭೂಯಿಷ್ಠವಾದ ಮೂರು ಮಹಾಕಾವ್ಯಗಳನ್ನು ರಚಿಸಿದ್ದಾನೆ. ಆತನ ‘ಬಸವರಾಜ ವಿಜಯ’ ಮಹತ್ವದ ಕೃತಿ ಎಂದು ಪರಿಗಣಿತವಾಗಿದೆ.
©2025 Book Brahma Private Limited.