ಹದಿನಾರನೇ ಶತಮಾನದಲ್ಲಿ ವಿಜಯನಗರದ ದೊರೆ ವೆಂಕಟಪತಿರಾಯನ 77 ಮಂದಿ ಪಾಳೇಗಾರರಲ್ಲಿ ಒಬ್ಬನಾಗಿದ್ದ ಇಮ್ಮಡಿ ಚಿಕ್ಕಭೂಪಾಲನ ಕುರಿತ ಕೃತಿ ಇದು. ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿ ಮತ್ತು ಡಾ. ವೀರಣ್ಣ ರಾಜೂರ ಅವರ ಪ್ರಕಾರ ಕಾವ್ಯಾತ್ಮಕವಾಗಿ ಇದಕ್ಕೆ ಅಷ್ಟೇನೂ ಮಹತ್ವ ಇರದಿದ್ದರೂ ಸ್ಥಳನಾಮ, ವ್ಯಕ್ತಿನಾಮ, ರಾಜಕೀಯ ಸಂಘರ್ಷದ ಜೊತೆಗೆ ಪ್ರಜಾ ಪರಿಸರದ ಸ್ಪಷ್ಟ ಚಿತ್ರಣ ನೀಡುವ ಕಾರಣಕ್ಕೆ ಮುಖ್ಯವೆನಿಸುತ್ತದೆ.
ಚಿಕ್ಕಭೂಪಾಲನ ಬ್ರಹ್ಮವಿರಚನೆ, ಹಿರಿಯ ಮಗ ತೋಂಟದರಾಯವೀರನ ಸ್ವರ್ಗಾರೋಹಣ ಈತನ ಕಿರಿಯ ಮಗ ಸಪ್ಪೇಂದ್ರ ಕಟ್ಟಿಸಿದ ಮಲ್ಲೇಶ ದೇವಾಲಯ ನಿರ್ಮಾಣ ಇತನ ಕಣ್ಣಮುಂದೆಯೇ ಜರುಗಿರಬೇಕು ಎಂದು ಕೃತಿಕಾರರು ಹೇಳಿದ್ದಾರೆ. ಧಾರವಾಡದ ಶ್ರೀಮುರುಘಾಮಠದ ಶ್ರೀಬಾಲಲೀಲಾ ಮಹಾಂತಶಿವಯೋಗೀಶ್ವರ ಗ್ರಂಥಮಾಲೆಯ ಮೂಲಕ ಮೊದಲ ಬಾರಿಗೆ ಪ್ರಕಟವಾಗಿದ್ದ ಕೃತಿಯನ್ನು ಸಪ್ನ ಬುಕ್ ಹೌಸ್ ಮರುಮುದ್ರಣ ಮಾಡಿದೆ.
©2024 Book Brahma Private Limited.