ಖ್ಯಾತ ಸಾಹಿತಿ ಎಸ್. ವಿದ್ಯಾಂಶಕರ ಅವರು ಸಂಪಾದಿತ ಕೃತಿ-ಚಾಮರಸನ ಪ್ರಭುಲಿಂಗ ಲೀಲೆ. ಈ ಕೃತಿಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾಗಿದ್ದು, ಇಮ್ಮಡಿ ಪ್ರೌಢದೇವರಾಯರ ರಾಜಾಶ್ರಯದಲಿದ್ದನು.. ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವರ ಬಿರುದುಗಳು. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ಕಾವ್ಯವಿದು. ಕಾವ್ಯದ ಉದ್ದಕ್ಕೂ ಅಲ್ಲಮನ ಚರಿತ್ರೆಯನ್ನು ಚಿತ್ರಿಸಲಾಗಿದೆ. ಇಲ್ಲಿಯ ಭಾಷೆ ತೀರಾ ನಯಗಾರಿಕೆಯಿಂದ ಕೂಡಿದ್ದು, 12ನೇ ಶತಮಾನದ ಶಿವಶರಣ-ಶಿವಶರಣೆಯರನ್ನು ಈ ಕವಿಯು ಚೆನ್ನಾಗಿ ಅಧ್ಯಯನ ಮಾಡಿದ್ದ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಪ್ರಭುಲಿಂಗ ಲೀಲೆಯು ಉತ್ತಮ ಕಾವ್ಯ ಎಂಬುದನ್ನು ಸ್ವತಃ ಕವಿ ಚಾಮರಸನೇ ಹೀಗೆ ಹೇಳಿಕೊಂಡಿದ್ದು ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಅತಿಶಯೋಕ್ತಿಯಲ್ಲ.
©2025 Book Brahma Private Limited.