ಹಂಪಿಯ ಹರಿಹರದೇವನ ಶತಕಗಳ ಪೈಕಿ ರಕ್ಷಾಶತಕ ಮತ್ತು ಪಂಪಾಶತಕಗಳು ಪ್ರಮುಖವಾಗಿದ್ದು, ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಧಾರವಾಡದ ಶ್ರೀ ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯದ ಬೆಳ್ಳಿ ಹಬ್ಬದಂಗವಾಗಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯು 1943ರಲ್ಲಿ ಮೊದಲ ಆವೃತ್ತಿ ಕಂಡಿತ್ತು. 1951ರಲ್ಲಿ ಶಿ.ಶಿ. ಬಸವನಾಳರು ಮರಣ ಹೊಂದಿದ್ದು, ಅವರ ಅನುಪಸ್ಥಿತಿಯಲ್ಲಿ ಕೃತಿ ಎರಡನೇ ಆವೃತ್ತಿ ಪಡೆಯುತ್ತಿದೆ. ಈ ಕೃತಿಯನ್ನು ಮೈಸೂರು ವಿ.ವಿ. ಹಾಗೂ ಕರ್ನಾಟಕ ವಿ.ವಿ. ಗಳು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿದ್ದವು. ಹರಿಹರ ಕವಿಯ ಸಮಗ್ರ ಪರಿಚಯದೊಂದಿಗೆ ಶತಕಗಳನ್ನು ಸಂಗ್ರಹಿಸಿ ಕೊಡಲಾಗಿದೆ.
©2025 Book Brahma Private Limited.