ಕುಮಾರವ್ಯಾಸ ಭಾರತ-ಲೇಖಕ ಅ.ರಾ. ಸೇತುರಾಮರಾವ್ ಅವರು ಕುಮಾರವ್ಯಾಸ ಭಾರತವನ್ನು ಸಂಪಾದಿಸಿ, ವ್ಯಾಖ್ಯಾನಿಸಿರುವ ಕೃತಿ. ಗಂಜೀಫಾ ರಘುಪತಿ ಭಟ್ ಅವರು ಕುಮಾರವ್ಯಾಸ ಭಾರತದ ಮಹತ್ವದ ಘಟನೆಗಳನ್ನು ಆಧರಿಸಿ ಆಕರ್ಷಕ ಹಾಗೂ ಪರಿಣಾಮಕಾರಿ ಚಿತ್ರವನ್ನು ರಚಿಸಿದ್ದು, ಕೃತಿಯ ಮೌಲ್ಯ ಮತ್ತಷ್ಟು ಹೆಚ್ಚಿಸಿದೆ. ಕುಮಾರವ್ಯಾಸನ ಮೂಲ ಕೃತಿಯನ್ನು ಓದಲಾಗದವರಿಗೆ ಈ ಕೃತಿಯು ಅತ್ಯಂತ ಸರಳ ಶೈಲಿಯಲ್ಲಿ ಮೂಡಿಬಂದಿದ್ದು, ಕುಮಾರ ವ್ಯಾಸ ಭಾರತದ ಸಾಹಿತ್ಯ ಸಾರ ಸವಿಯಲು ಅನುಕೂಲವಾಗುವಂತೆ ಕೃತಿ ರಚಿಸಲಾಗಿದೆ.
©2025 Book Brahma Private Limited.