ವೀರನಾಗಿ ಹುಟ್ಟಿ, ವೀರನಾಗಿ ಬೆಳೆದು, ವೀರನಾಗಿ ಸತ್ತ ಐತಿಹಾಸಿಕ ವ್ಯಕ್ತಿ ಕುಮಾರರಾಮನ ಬಗ್ಗೆ ಈವರೆಗೆ ೫ ಕೃತಿಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಒಂದಾಗಿರುವ ಈ `ಹೊಸ ಕುಮಾರರಾಮನ ಸಾಂಗತ್ಯ'ವನ್ನು ಸಂಪಾದಿಸಿ ಇಲ್ಲಿ ಸಂಕಲಿಸಲಾಗಿದೆ. ಈ ಕೃತಿಯ ಮೂಲಕರ್ತೃ ಯಾರೆಂಬುದು ಇನ್ನೂ ತಿಳಿದಿಲ್ಲವಾದರೂ `ಹೊಸ ಕುಮಾರರಾಮನ ಸಾಂಗತ್ಯ' ಕಾವ್ಯವು ತನ್ನ ಆಳಕ್ಕೆ ಸಿಕ್ಕಷ್ಟು, ನಿಲುವಿಗೆ ತಕ್ಕಷ್ಟು ವೀರಕುಮಾರ ರಾಮನ ಜೀವನ-ಸಾಹಸವನ್ನು ಸೆರೆಹಿಡಿದಿದೆ. ಮಧ್ಯಕಾಲೀನ ಕರ್ನಾಟಕದ ವೀರಜೀವನವನ್ನು, ಅದಕ್ಕೆ ಪೂರಕವಾದ ಎಲ್ಲ ಮುಖಗಳನ್ನು ಚಿತ್ರಿಸುವ ಮಹತ್ತ್ವದ ಕೃತಿ ಇದಾಗಿದೆ. ಈ ಕೃತಿಯು ಹೊಂದಿರುವ ಅಧ್ಯಾಯಗಳೆಂದರೆ: ದೇವಗಿರಿಯಲ್ಲಿ ಮುಮ್ಮಡಿಸಿಂಗನಿಂದ ರಾಜಸೇವೆ ,ರಾಯದುರ್ಗದಲ್ಲಿ ಮುಮ್ಮಡಿಸಿಂಗ - ಕಂಪಿಲ , ಹೊಸಮಲೆಯಲ್ಲಿ ಕಂಪಿಲ ರಾಜ್ಯಭಾರ , ಗುತ್ತಿಯ ಜಗದಪ್ಪನೊಡನೆ ಯುದ್ಧ , ಕುಮಾರರಾಮ ಓರುಗಲ್ಲ ಪ್ರವೇಶಿಸಿದುದು , ಓರುಗಲ್ಲ ಯುದ್ದ ಬೋಲ್ಲನನ್ನು ತಂದುದು , ಶೂಲದ ಹಬ್ಬ-ರತ್ನಾಜಿ ವ್ಯಾಮೋಹ; ಕುಮ್ಮಟ ದುರ್ಗ ನಿರ್ಮಾಣ ,ನೀರಾಟ-ಚೆಂಡಿನಾಟ-ರತ್ನಿಯ ಮೋಹ , ನೆಲಮಾಳಿಗೆಯಲ್ಲಿ ಕುಮಾರರಾಮ; ನೇಮಿಯ ಕಾಳಗ-ಸೋಲು; ಮಾದಗತಿಯ ಕಾಳಗ - ರಾಮನ ವೀರಮರಣ
©2024 Book Brahma Private Limited.