`ಚೆನ್ನವೀರ ಜಗದ್ಗುರು ವಿರಚಿತ ಷಟ್ ಸ್ಥಲ ವಲ್ಲಭ' ಕೃತಿಯನ್ನು ಪಂಡಿತ ಚನ್ನಪ್ಪ ಎರೇಸೀಮೆ ಹಾಗೂ ಎಚ್. ದೇವೀರಪ್ಪ ಅವರು ಸಂಪಾದಿಸಿದ್ದಾರೆ. ಷಟ್ ಸ್ಥಲ ವಲ್ಲಭ ಎಂಬ ಗ್ರಂಥವನ್ನು ರಚಿಸಿದವರು-ಚೆನ್ನವೀರೇಶ್ವರರು. ಕವಿ ಚರಿತೆಕಾರರ ಪ್ರಕಾರ ಇವರು 1470ರ ಆಸುಪಾಸು ಜೀವಿಸಿದ್ದರೆಂದು ಹೇಳಲಾಗುತ್ತಿದೆ. ಕಾಲ ನಿಗದಿ ಕುರಿತು ಸಂಶೋಧನೆಗಳು ನಡೆದಿವೆ. ಷಟ್ ಸ್ಥಲ ವಲ್ಲಭ ಕೃತಿಯು ಚಂಪೂಕಾವ್ಯವಾಗಿದೆ. ಬಸವಾದಿ ಪ್ರಮಥರ ನಂತರ ಷಟ್ ಸ್ಥಲ ಸಿದ್ಧಾಂತದ ಪ್ರಬಲ ಸಮರ್ಥಕರಾಗಿ ಕ್ರಾಂತಿಗೆ ನಾಂದಿ ಹಾಡಿದ ಶ್ರೀ ಮದನಾದಿ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರರ ಹಿರಿಮೆ-ಹೆಚ್ಚುಗಾರಿಕೆಯನ್ನು ಬೆಳಗುವ ಒಂದು ಉತ್ತಮ ಕೃತಿ.
©2025 Book Brahma Private Limited.