‘ಸರಸ ಸೌಗಂಧಿಕದ ಪರಿಮಳ’ ಕುಮಾರವ್ಯಾಸ ಭಾರತ ಸಂಗ್ರಹ ಈ ಕೃತಿಯನ್ನು ಲೇಖಕ ಕೃಷ್ಣಮೂರ್ತಿ ಹನೂರು ಅವರು ಸಂಪಾದಿಸಿದ್ದಾರೆ. ಇದು ಕುಮಾರವ್ಯಾಸ ಭಾರತ ಕಾವ್ಯ ಕುರಿತ ಸಮಗ್ರ ಮಾಹಿತಿಗಳನ್ನು ಒಳಗೊಂಡ 450 ಪುಟಗಳ ಚಿತ್ರವತ್ತಾದ ವಾಚಿಕೆ. ಈ ಕೃತಿಗೆ ಪ್ರೊ.ಕೆ. ಮರುಳಸಿದ್ದಪ್ಪ ಬೆನ್ನುಡಿ ಬರೆದಿದ್ದಾರೆ. ‘ಮಾನವ ಧರ್ಮವೇ ಕುಮಾರವ್ಯಾಸನ ಧರ್ಮ ಎಂದು ತೀರ್ಮಾನಿಸಿರುವ ಪ್ರೊ. ಕೃಷ್ಣಮೂರ್ತಿ ಹನೂರು, ಪ್ರಭುತ್ವ ವಿರೋಧ, ಯುದ್ಧ ವಿರೋಧ, ಸ್ತ್ರೀ ಪಕ್ಷಪಾತ, ಭಕ್ತಿಪರತೆಗಳತ್ತ ಗಮನ ಸೆಳೆಯುತ್ತಾರೆ. ಗದುಗಿನ ಭಾರತವನ್ನು ಸಂಗ್ರಹಿಸುವ ಅವರ ಕಾರ್ಯಕ್ಕೆ ಇದು ದಾರಿದೀಪವಾಗಿರುವಂತಿದೆ ಎನ್ನುತ್ತಾರೆ ಮರುಳಸಿದ್ದಪ್ಪ. ತಮ್ಮ ಪ್ರಸ್ತಾವನೆಯಲ್ಲಿ ಕುಮಾರವ್ಯಾಸ ಸಂಪಾದನಾ ಪರಂಪರೆಯನ್ನು ಪರಿಚಯಿಸಿದ್ದಾರೆ. ಕವಿಯ ಹುಟ್ಟೂರು ಕೋಳಿವಾಡ-ಗದುಗಿನ ಭಾಗದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿ, ಛಾಯಾಚಿತ್ರಗಳು, ಅರ್ಥಕೋಶ, ಕೃತಿ ಸೂಚಿಗಳನ್ನು ಅನುಬಂಧವಾಗಿ ಸೇರಿಸಿದ್ದಾರೆ.
©2025 Book Brahma Private Limited.