ಆದಯ್ಯನನ್ನು ಆತನ ವಚನ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಈ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಡಾ. ಎಂ.ಎಂ. ಕಲಬುರ್ಗಿ ಅವರು ಆತನ ವಚನೇತರ ಸಾಹಿತ್ಯವನ್ನು ಲಘುಕೃತಿ ಹೆಸರಿನಲ್ಲಿ ಮೊದಲಬಾರಿಗೆ ಹೊರತಂದರು. ಆದಯ್ಯಗಳ ಕಂದ, ಸ್ವರವಚನ, ಉಯ್ಯಲಪದ, ಮುಕ್ತಿಕ್ಷೇತ್ರ ಎಂಬ ನಾಲ್ಕು ಶೀರ್ಷಿಕೆಗಳ ಪಠ್ಯ ಮತ್ತು ಕೊನೆಯಲ್ಲಿ ಶಬ್ದಕೋಶ-ಟಿಪ್ಪಣಿಯನ್ನು ಈ ಕೃತಿ ಒಳಗೊಂಡಿದೆ. ಕನ್ನಡ ಸಂಶೋಧನಾ ಸಂಸ್ಥೆಯಲ್ಲಿದ್ದ ತಾಳೆಗರಿಯ ಕಟ್ಟೊಂದು ಈ ಕೃತಿಗೆ ಮೂಲಾಧಾರ.
©2024 Book Brahma Private Limited.