ಖ್ಯಾತ ಸಾಹಿತಿ ಡಾ. ವಿ. ಸೀತಾರಾಮಯ್ಯ ಅವರು ಕವಿ ರನ್ನನ ಕುರಿತು ರಚಿಸಿದ ಕೃತಿ-ಕವಿ ಕಾವ್ಯ ಪರಂಪರೆ ರನ್ನ. ಮಹಾಭಾರತದ ದುರ್ಯೋಧನನ ಪೌರುಷವನ್ನು ಪ್ರಶಂಸಿಸಿ ಬರೆದ ‘ಗದಾಯುದ್ಧ’ ಕಾವ್ಯದ ಮೂಲಕ ಕಾವ್ಯ ಪರಂಪರೆಗೆ ತನ್ನದೇ ಕೊಡುಗೆ ನೀಡಿರುವ ಕವಿ ರನ್ನ, ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಿನುಗುವ ಹೆಸರು. ಕವಿಯಾಗಿ ರನ್ನ, ಆತನ ಮೂಲ, ಕಾವ್ಯ, ಪ್ರಾಚೀನ ಪರಂಪರೆಯ ಸಾಹಿತ್ಯಕ್ಕೆ ಆತನ ಕೊಡುಗೆ ಇತ್ಯಾದಿ ಅಂಶಗಳನ್ನು ಚರ್ಚಿಸಿ, ಸಂಶೋಧನಾ ಸಾಮಗ್ರಿ ಪೂರೈಸುವ ಈ ಕೃತಿಯು ವಿದ್ಯಾರ್ಥಿ-ಬೋಧಕರಿಗೂ ಉತ್ತಮ ಆಕರ ಗ್ರಂಥವಾಗಿದೆ.
©2025 Book Brahma Private Limited.