ಹಿರಿಯ ವಿದ್ವಾಂಸ, ಶಾಸನ ತಜ್ಞ ಸೀತಾರಾಮ ಜಾಗೀರದಾರ ಅವರ ವಿದ್ವತ್ ಪೂರ್ಣ ಕೃತಿ-ಕವಿರಾಜಮಾರ್ಗ್ಗಂ. ನಿರವಧ್ಯಾನ್ವಯ ಶ್ರೀವಿಜಯನ ಕೃತಿ ಇದು. ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ ಕಂಡ ವ್ಯಾಕರಣ ಗ್ರಂಥವಿದು. ಕನ್ನಡ ವ್ಯಾಕರಣದ ವೈವಿಧ್ಯಮಯ ಲಕ್ಷಣಗಳನ್ನು ಅಲಂಕಾರಗಳನ್ನು, ಶಾಸ್ತ್ರಗಳನ್ನು ವಿವರಿಸಿದ ಅತ್ಯಂತ ಹಳೆಯ ಗ್ರಂಥ ಎಂಬ ಖ್ಯಾತಿ ಇದಕ್ಕಿದೆ. ಪಂಪಪೂರ್ವ ಯುಗಕ್ಕೂ ಪೂರ್ವದಲ್ಲಿ ಅಂದರೆ ಕ್ರಿ.ಶ. 850 ಕ್ಕೂ ಪೂರ್ವದಲ್ಲಿ ರಚಿತವಾಗಿದೆ. ಅಮೋಘವರ್ಷ ನೃಪತುಂಗ ಆಳ್ವಿಕೆಯಲ್ಲಿದ್ದ ಶ್ರೀವಿಜಯನು ಈ ಅಲಂಕಾರ ಗ್ರಂತ ರಚಿಸಿದನೆಂಬ ಖ್ಯಾತಿ ಇದೆ. ಈ ಗ್ರಂಥವನ್ನು ವ್ಯಾಖ್ಯಾನಿಸಿದ, ವಿಶ್ಲೇಷಿಸಿದ, ವಿಮರ್ಶಿಸಿದ ಗ್ರಂಥವಿದು.
©2025 Book Brahma Private Limited.