ಚಿಂತಕ ಎಸ್.ಜಿ. ನರಸಿಂಹಾಚಾರ್ ಅವರು ಬರೆದ ಕೃತಿ ಪದ್ಯಸಾರ-ಪ್ರಥಮ ಭಾಗ. ಕೃತಿಯಲ್ಲಿ ದ್ವಿಪದಿ (ಪಾರ್ವತಿಯ ಕೊರವಂಜಿ, ದಾಸರ ಪದಗಳು) ತ್ರಿಪದಿ (ಸರ್ವಜ್ಞನ ವಚನಗಳು), ಚೌಪದಿಗಳು (ದಾಸರ ಪದಗಳು), ಸಾಂಗತ್ಯ ( ರಾಮನಾಥನ ಚರಿತೆ), ರಹಳೆ (ಕುಮುದೇಂದು ರಾಮಾಯಣ), ಲಲಿತಾ (ದೀಕ್ಷಾಬೋಧೆ) , ಕುಸುಮ ಷಟ್ಪದಿ (ಮುಪ್ಪಿನ ಷಡಕ್ಷರಿಯ ವಚನಗಳು), ಭೋಗ ಷಟ್ಪದಿ (ಮುಪ್ಪಿನ ಷಡಕ್ಷರಿಯ ವಚನಗಳು), ಭಾಮಿನಿ ಷಟ್ಪದಿ (ರಾಮಾಭ್ಯುದಯ ಕಥಾಮಂಜರಿ, ಪ್ರಭುಲಿಂಗ ಲೀಲೆ, ತೊರವಿ ರಾಮಾಯಣ ಇತ್ಯಾದಿ), ಪರಿವರ್ಧಿನಿ ಷಟ್ಪದಿ (ಕುಮುದೇಂದು ರಾಮಾಯಣ), ವಾರ್ಧಕ ಷಟ್ಪದಿ (ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಚೆನ್ನಬಸವ ಪುರಾಣ), ಕಂದ ವೃತ್ತಾದಿಗಳು (ಸುಭಾಷಿತ, ಸೋಮೇಶ್ವರ ಶತಕ ಇತ್ಯಾದಿ), ಸಾಂಗತ್ಯ (ಹದಿಬದಿಯ ಧರ್ಮ, ರಗಳೆ, ಲಲಿತ), ರಾಜಶೇಖರ ವಿಳಾಸ, ಕಬ್ಬಿಗರ ಕಾವ್ಯ ಹೀಗೆ ವಿವಿಧ ಅಧ್ಯಾಯಗಳಡಿ ಇಡೀ ಕನ್ನಡ ಸಾಹಿತ್ಯದ ಪದ್ಯಸಾರವನ್ನು ನೀಡಿರುವ ಕೃತಿ ಇದು.
©2025 Book Brahma Private Limited.