ಕಾರ್ತಿಕದ ಮೋಡ ಕಣವಿಯವರ ಹನ್ನೆರಡನೇ ಕವನ ಸಂಕಲನ. 1986ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಸಂಕಲನದಲ್ಲಿ ಒಟ್ಟು 30 ಕವಿತೆಗಳಿವೆ.
ಗೋಕಾಕ ಚಳುವಳಿ ಕನ್ನಡ ನಾಡಿನಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಧಾರವಾಡದಲ್ಲಿ ಸತ್ಯಾಗ್ರಹ ನಡೆಸಿದ ಕಣವಿಯವರು ಕನ್ನಡಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿದ್ದರು. ಆಗ ರಚಿಸಿದ ಕವಿತೆ 'ಸತ್ಯಾಗ್ರಹ' ಕವಿಮನದ ಭಾವನೆಗಳನ್ನು ಚಿತ್ರಿಸಿದೆ.
ಕನ್ನಡ ನಾಡಿನ ಅನ್ನ, ನೀರು, ಗಾಳಿಯನ್ನುಂಡ ತಾಯ್ನುಡಿಗೆ ದ್ರೋಹ ಬಗೆಯುವ ಭ್ರಷ್ಟ ಜನರ ವಿರುದ್ದ ಕವಿ ಸಮರ ಸಾರಿದ್ದಾರೆ. ಪರಿಪೂರ್ಣ ಚೆಲುವ ಕನ್ನಡನಾಡು ಆಗುವವರೆಗೆ ನಾವು ಉದಯವಾಗಲಿ ಎಂದೇ ಹಾಕೋಣ ಎಂದು ಬರೆದಿದ್ದಾರೆ. ಕಣವಿಯವರ ಕವಿತೆಯಲ್ಲಿ ಪ್ರತಿಭಟನೆ ಎದ್ದು ಕಾಣುವುದಿಲ್ಲ. ಆದರೆ, ವಾಸ್ತವ ಅರಿತು ನಡೆಯುವ, ಪ್ರತಿಸ್ಪಂದಿಸುವುದನ್ನು ಕಾಣಬಹುದು.
©2024 Book Brahma Private Limited.