ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ

Author : ಎಫ್.ಟಿ.ಹಳ್ಳಿಕೇರಿ

Pages 44

₹ 30.00




Year of Publication: 2003
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಅಶ್ವಶಾಸ್ತ್ರಕ್ಕೆ ಸಂಬಂಧಪಟ್ಟ ಕಾವ್ಯ 'ಹಯರತ್ನ ಶ್ರೇಣಿ'ಯು ೭ ಸಂಧಿ, ೧೫೨ ಪದ್ಯಗಳ ನ್ನೊಳಗೊಂಡ ಒಂದು ಕಿರುಕೃತಿ. ಹಿರಿಯಣ್ಣ ಕವಿಯು ಕುದುರೆಗಳ ಗುಣಲಕ್ಷಣ, ಸ್ವರೂಪ, ಪ್ರಕಾರ, ಅವುಗಳಿಗೆ ಬರುವ ಕಾಯಿಲೆಗಳು, ಔಷಧಿಗಳು ಇತ್ಯಾದಿ ಸಂಗತಿಗಳನ್ನು ಈ ಕಾವ್ಯದ ಮೂಲಕ ವಿವರಿಸಿದ್ದಾನೆ. ಈ ಕಾವ್ಯ ಸಂಕಲನವು ಹೊಂದಿರುವ ಅಧ್ಯಾಯಗಳೆಂದರೆ: ಸಂಧಿ-ದುರ್ಲಕ್ಷಣ ವಿಚಾರ , ಸಂಧಿ-ಶುಭಲಕ್ಷಣ , ಸಂಧಿ-ಅಶ್ವಗಳ ಜನನ , ಸಂಧಿ-ನಾನಾ ವಿಧದ ರೋಗ , ಸಂಧಿ-ವಾಯು ಮುಖ ರೋಗಾವಳಿ ವಿವರ , ಸಂಧಿ-ರೋಗಗಳಿಗೆ ಚಿಕಿತ್ಸೆ , ಸಂಧಿ-ವೈದ್ಯೋಪಚಾರದ ವಿಚಾರ

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books