ಹನಿ ಹನಿ ಪ್ರೀತಿ

Author : ಎಚ್. ಡುಂಡಿರಾಜ್

Pages 80

₹ 112.00




Year of Publication: 2015
Published by: ಅಂಕಿತ ಪುಸ್ತಕ

Synopsys

ಡುಂಡಿರಾಜ್‍ರವರು ತಮ್ಮ ವೈವಾಹಿಕ ಜೀವನದ 25ನೇ ವರ್ಷಾಚರಣೆಯ ಸಂಧರ್ಭದಲ್ಲಿ ಬರೆದಂತಹ ಪುಸ್ತಕ ಇದು. ವೈವಾಹಿಕ ಜೀವನದಲ್ಲಿ ಸಾಮಾನ್ಯವಾಗಿ ನಡೆಯುವ ಸರಸ – ವಿರಸಗಳು ಈ ಪುಸ್ತಕದ ಕಥಾವಸ್ತು. ವೈವಾಹಿಕ ಜೀವನದ ಹಲವು ಮಜಲುಗಳನ್ನು ವ್ಯಂಗ್ಯವಾಗಿ ನಿರೂಪಿಸಿದ್ದಾರೆ. ಜೊತೆಗೇ, ವೈವಾಹಿಕ ಜೀವನ ಸುಖಕರವಾಗಿ ನಡೆಯಲು ಅಗತ್ಯವಾದ ಸಲಹೆಗಳನ್ನು ಕೂಡ ಡುಂಡಿರಾಜ್‍ರವರು ಈ ಪುಸ್ತಕದಲ್ಲಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಪುಸ್ತಕವು ವೈವಾಹಿಕ ಜೀವನ ಮೌಲ್ಯ ಹಾಗು ಹಾಸ್ಯದ ಪರಿಪೂರ್ಣ ಮಿಶ್ರಣ. ಈ ಪುಸ್ತಕದಲ್ಲಿ ಡುಂಡಿರಾಜ್‍ರವರ ಪತ್ನಿ ಭಾರತಿಯವರು ಈ ಕೃತಿಯ ನಾಯಕಿ. ಅವಳು ಅಕಸ್ಮಾತ್‍ ಸಿಕ್ಕಳು, ನನ್ನನ್ನು ನೋಡಿ ನಕ್ಕಳು ನಮಗೀಗ ಎರಡು ಮಕ್ಕಳು. ಈ ಚುಟುಕು ಅವರ ಪುಸ್ತಕದ ಪ್ರಮುಖ ಆಕರ್ಷಣೆಯ ವಿಷಯವಾಗಿದ್ದು, ಹಲವು ಬಾರಿ ಇದನ್ನು ಬಳಸಿದರೂ ಇನ್ನೂ ಹೊಸತರಂತೆ ಭಾಸವಾಗುವ ನಿರೂಪಣಾ ಶೈಲಿ ಈ ಪುಸ್ತಕದಲ್ಲಿದೆ.

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books