ಡುಂಡಿರಾಜ್‍ರವರ ಹನಿಕವನಗಳನ್ನೊಳಗೊಂಡ ಮತ್ತೊಂದು ಪುಸ್ತಕ ಹನಿ ಗಣಿ. ಇಂಗ್ಲೀಷ್‍ನಲ್ಲಿ ಹನಿ ಎಂದರೆ ಜೇನು ಎಂದರ್ಥ. ಜೇನಿನಂತೆ ಸಿಹಿಯಾದ ಚುಟುಕುಗಳನ್ನು ತಮ್ಮ ಲೇಖನಿಯಿಂದ ಗಣಿಗಾರಿಕೆ ಮಾಡಿದಾಗ ಮೂಡಿಬಂದ ಕೃತಿಯೇ ಹನಿ ಗಣಿ. ತಮ್ಮ ಸಾಂಪ್ರದಾಯಿಕ ಶೈಲಿಯಾದ ಹಾಸ್ಯ ಚುಟುಕುಗಳ ಮೂಲಕ ಓದುಗರನ್ನು ರಂಜಿಸುವುದಲ್ಲದೇ, ಚುಟುಕು ಸಾಹಿತ್ಯದ ಕುರಿತಾದ ಜನಾಭಿಪ್ರಯಕ್ಕೆ ಕೂಡ ಈ ಪುಸ್ತಕವು ಹೊಸ ಆಯಾಮ ನೀಡುತ್ತದೆ. ಪ್ರಾಸ ಪದಗಳ ಯಥೇಚ್ಛ ಬಳಕೆಯನ್ನು ಈ ಪುಸ್ತಕದಲ್ಲಿ ಕಾಣಬಹುದು. ಕನ್ನಡದ ಪದಗಳೊಂದಿಗಿನ ಆಟ, ಶ್ಲೇಷೆಯ ಬಳಕೆ, ಪದಗಳ ವಿಘಟನೆ ಮತ್ತು ಪ್ರಾಸಗಳ ಸೃಷ್ಠಿ ಈ ಪುಸ್ತಕದಲ್ಲಿ ಕಾಣಬಹುದು.
©2024 Book Brahma Private Limited.