ಶಶಿಕಾಂತ ದೇಸಾಯಿ ಅವರ ಚುಟುಕುಗಳ ಸಂಕಲನ ಹನಿಮುತ್ತು. ಇಲ್ಲಿನ ಚುಟುಕುಗಳಲ್ಲಿ ಭಾವವಿದೆ, ಸಮಕಾಲೀನ ವಿಷಯಗಳಿಗೆ ಸ್ಪಂದನೆಯಿದೆ, ಪ್ರೀತಿಯಿದೆ, ಮೌಢ್ಯತೆಯ ವಿರುದ್ಧದ ಜಾಗೃತಿಯಿದೆ. ಚಿಕ್ಕ ಚುಟುಕುಗಳ ಮೂಲಕ ತನ್ನ ಸುತ್ತಲಿನ ವಿಷಯಗಳಿಗೆ ಸ್ಪಂಧಿಸುವ ಪ್ರಯತ್ನವನ್ನು ಲೇಖಕರು ತಮ್ಮ ಚುಟುಕುಗಳ ಮೂಲಕ ಮಾಡಿದ್ದಾರೆ.
ವಿಧವೆಯೊಬ್ಬಳ ಬದುಕು
ಕಪ್ಪು ಬಿಳುಪಿನ ಚಿತ್ರ
ಯಾರಾದರೂ ಕುಂಕುಮವಿಟ್ಟು
ಹೂ ಮುಡಿಸಿದರೆ
ಅವಳ ಬದುಕೇ ಆಗಬಹುದು
ಈಸ್ಟಮನ್ ಕಲರ್ ಚಿತ್ರ
©2025 Book Brahma Private Limited.