ಹನಿ ಮೋಹಿನಿ

Author : ಎಚ್. ಡುಂಡಿರಾಜ್

Pages 112

₹ 90.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

ಹೆಚ್‍. ಡುಂಡಿರಾಜ್‍ರವರು ಬರೆದ ಹನಿಕವನಗಳ ಸಂಕಲನವೇ ಹನಿ ಮೋಹಿನಿ. ತಮ್ಮ ಸಾಂಪ್ರದಾಯಿಕ ಶೈಲಿಯಾದ ಪ್ರಾಸಪದಗಳ ಚುಟುಕುಗಳ ಪುಸ್ತಕ. ಅತ್ತೆಮಾವ ಇರುವ ಮನೆಗೆ ಯಾರು ಕೊಡುತ್ತಾರೆ ಹೆಣ್ಣು? ಆದ್ದರಿಂದಲೇ ನಮ್ಮ ಗಣಪನಿಗೆ ಮದುವೆ ಆಗಿಲ್ಲ ಇನ್ನೂ! ಈ ಚುಟುಕದೊಂದಿಗೆ ಆರಂಭವಾಗುವ ಪುಸ್ತಕವು, ಉದ್ದಕ್ಕೂ ಇಂತಹ ಮನಸ್ಸಿಗೆ ಕಚಗುಳಿ ಇಡುವ, ಅಹ್ಲಾದಕರ ಚುಟುಕಗಳನ್ನು ಓದಿಸುತ್ತಾಹೋಗುತ್ತದೆ. ಒಂದರ ಮೇಲೊಂದರಂತೆ ಒಂದು ಚುಟುಕುಗಳು ನಮ್ಮನ್ನು ರಂಜಿಸುತ್ತಾ, ಯೋಚನೆಗೆ ತಳ್ಳುತ್ತಾ ಸಾಗುತ್ತವೆ.

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books