ವಿಜ್ಞಾನ ಕುರಿತ ಚಿಂತನೆಗಳ ವೇಳೆ ಲೇಖಕ ಜಿ.ಟಿ. ನಾರಾಯಣರಾವ್ ಅವರೊಳಗೆ ಹುಟ್ಟಿಕೊಂಡ ನಾಲ್ಕು ಸಾಲಿನ ಹನಿಗವಿತೆಗಳೇ ’ಅತ್ರಿಸೂನು ಉವಾಚ’. ಆಧುನಿಕ ಕನ್ನಡದ ತತ್ವಪದದಂತೆಯೇ ಇರುವ ಮಂಕುತಿಮ್ಮನ ಕೃತಿಯಿಂದ ಪ್ರಭಾವಿತರಾದ ಅವರು ಅದೇ ಧಾಟಿಯಲ್ಲಿ ಈ ಚುಟುಕುಗಳನ್ನೂ ಹೇಳುವ ಯತ್ನ ಮಾಡಿದ್ದಾರೆ.
ರಾಹುಕೇತುಗಳೆಂಬ ರಕ್ಕಸರು ನುಂಗುವರು
ಗ್ರಹಣ ಕಾಲದಿ ಸೂರ್ಯ ಚಂದ್ರರೆನ್ನುತ ಬಲು
ತಹತಹಿಸಿ ವ್ರತನಿಯಮ ಬಲಿ ಹೋಮವೆಸಗುವವ
ಸಹಜಮತಿ ಶೂನ್ಯ ಗಾವಿಲ ಕಣಾ ಅತ್ರಿಸೂನು
ಎಂಬಂತಹ ಸಾಲುಗಳಿಂದ ಹಿಡಿದು
ಹೂಂಕಾರದಾರ್ಭಟೆಗೆ ಮಂಕಾಯಿತು ಓಂಕಾರ
ಸಂಕಷ್ಟ, ಭಸ್ಮಾಸುರನ ಹಸ್ತ ಅತ್ರಿಸೂನು
ಎಂಬುವವರೆಗೆ ವಿಜ್ಞಾನ- ತತ್ವಜ್ಞಾನದ ಉಯ್ಯಾಲೆಯಲ್ಲಿ ಓದುಗರು ಜೀಕಬಹುದು.
©2024 Book Brahma Private Limited.