ಲೇಖಕ ಸಮುದ್ರವಳ್ಳಿ ವಾಸು ಅವರ ಹನಿಗವನಗಳ ಸಂಕಲನ ನನ್ನಾಕೆ ಹೇಳಿದ್ದು. ಚುಟುಕು ಕವಿ, ಹಾಸ್ಯ ಬರಹಗಾರ ಪತ್ತಂಗಿ ಎಸ್ ಮುರಳಿ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಹನಿಗವನ ರಚಿಸುವಾಗ ಇವರು ಬಲವಂತವಾಗಿ ಪ್ರಾಸಕ್ಕೆ ಜೋತುಬಿದ್ದಿರುವಂತೆ ಕಂಡುಬರತ್ತವಾದರೂ ಅದು ವಿಪರೀತವಿಲ್ಲ ಎಂಬುದು ಸಮಾಧಾನದ ವಿಷಯ. ಇಲ್ಲಿ ಕವಿ ಪ್ರೀತಿ, ಪ್ರೇಮ, ಕುಟುಂಬ, ಹಿರಿಯ ಕವಿಗಳ ಕುರಿತು, ಸಾಮಾಜಿಕ ರಾಜಕೀಯ ಸೇರಿದಂತೆ, ಅನೇಕ ವಿಚಾರಗಳನ್ನು ಆಯ್ದುಕೊಮಡು ರಚಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಮೀಸೆ ಮಣ್ಣಾಗಲಿಲ್ಲ, ಜಡಿದಿತ್ತು, ಗಾಳಕ್ಕೆ ಸಿಕ್ಕಿ, ಬಿಚ್ಚಂಗಿಲ್ಲ, ಗಂಡಸರ ಪಾಡು, ಇದ್ರೆ, ಲೆಕ್ಕ, ಸಾಲುತ್ತಿಲ್ಲ, ಕರೆ ಸೇರಿದಂತೆ ಅನೇಕ ಹನಿಗವನಗಳಿವೆ.
©2025 Book Brahma Private Limited.