`ಇಶಾದ್ರಿಯ ಕವನಗಳು’ ಕೃತಿಯು ಇಶ್ರಾದ್ ಮೂಡಬಿದ್ರಿ ಅವರ ಹನಿಗವನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಕವಿತೆಗಳು ಹೀಗಿವೆ : ಎಷ್ಟು ಕೊಡುತ್ತೀರಿ ಹಣ, ಚಿನ್ನ, ಬಟ್ಟೆ? ಲಗ್ನ ಎನ್ನುವುದು ಈಗ ಮಾರುಕಟ್ಟೆ ಲೆಕ್ಕ ಚುಕ್ತಾ ಆದರೆ ಮನೆಯಲ್ಲಿ ಮಾಲು ಇಲ್ಲವಾದರೆ ವಧು ಬೆಂಕಿಯ ಪಾಲು ಎನ್ನುವುದು ಇಲ್ಲಿ ಬಿತ್ತರಿಸಿಕೊಂಡಿದೆ. ಸಾಗುತ್ತಿರುವಾಗ ಸುಖದ ನೌಕೆ ಬೇಡ ಪರಸ್ತ್ರೀ ಬಯಕೆ ರಟ್ಟಾದರೆ ಗುಟ್ಟು – ಮಾನ ದಿಕ್ಕಾಪಾಲು ಸಂಸಾರವಂತೂ ಒಡೆದ ಹಾಲು ಅಂದು ನಿನಗೆ ಹೃದಯವನ್ನು ಕೊಟ್ಟು ಈ ಅಲೆಯುತ್ತಿದ್ದೇನೆ ದೋಸೆ ಹಿಟ್ಟು ತಿಳಿದಿದ್ದರೆ ಈ ರೀತಿಯ ಶಿಕ್ಷೆ ಕೇಳುತ್ತಿರಲಿಲ್ಲ ಪ್ರೇಮದ ಭಿಕ್ಷೆ ಎಂದು ಈ ಕೃತಿಯಲ್ಲಿ ಕವಿ ಬಣ್ಣಿಸಿದ್ದಾರೆ.
©2024 Book Brahma Private Limited.