ಹೆಚ್. ಡುಂಡಿರಾಜ್‍ರವರ ಹನಿಗವನ ಪ್ರೇಮ ಚಿರವಾಗಿ ಬಾಳುವಂತದ್ದು. ಹನಿಗವನದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ, ಅದರಲ್ಲೇ ಸಮೃದ್ಧ ಬೆಳೆ ಬೆಳೆದ ಸಾಹಿತ್ಯ ಕೃಷಿಕರಿವರು. ಹನಿಗವನದಲ್ಲಿ ಸಾರ್ಥಕತೆ ಕಂಡವರು. ಗದ್ಯದ ರೂಪದಲ್ಲಿ ಗಂಭೀರವಾಗಿ ಬರೆಲ್ಪಡುವ ವಿಷಯಗಳನ್ನು, ಪ್ರಾಸ ಪದಗಳ ಮೂಲಕ, ಹೊಸ ಓದುಗರಿಗೂ ಅರ್ಥ ಆಗುವ ರೀತಿಯಲ್ಲಿ ನಿರೂಪಿಸುವ ಸಾಹಿತಿ ಡುಂಡಿರಾಜ್. ಇಡಿ ಕಿಡಿ ಕವನಗಳು ಪುಸ್ತಕಗಳಲ್ಲಿ ಕೂಡ ಪದಗಳನ್ನು ಛೇಡಿಸುವ ಚೇಷ್ಟೆಗಳನ್ನು ಮುಂದುವರೆಸಿದ್ದಾರೆ. ಶಬ್ದಗಳ ವಕ್ರ ಸಂಚಾರ, ಸಮಾಜದ ಮೂಲೆ ಮೂಲೆಯನ್ನೂ ಹುಡುಕಿ ಕಲೆಹಾಕಿದ ವಿಷಯಗಳನ್ನು ಅಕ್ಷರಗಳಾಗಿ ರೂಪಾಂತರಿಸುವ ಕಲೆಯನ್ನು ಧಾರಾಳವಾಗಿ ಪ್ರದರ್ಶಿಸಿದ್ದಾರೆ.
©2025 Book Brahma Private Limited.