‘ಧರಣಿ ಚುಟುಕು ಕವಿತೆಗಳು’ ಲೇಖಕಿ ಧರಣೀದೇವಿ ಮಾಲಗತ್ತಿ ಅವರ ಚುಟುಕು ಕವಿತೆಗಳ ಸಂಕಲನ. ಈ ಕೃತಿಗೆ ಪ್ರಕಾಶಕರಾದ ಡಾ.ಎಂ.ಜಿ.ಆರ್. ಅರಸ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಚುಟುಕುಗಳ ರಚನೆಯಿಂದ ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡಿ ಮಹಾಕಾವ್ಯಗಳನ್ನು ರಚಿಸಿ ಸುವಿಖ್ಯಾತರಾದವರನ್ನು ವಿಫುಲ ಸಂಖ್ಯೆಯಲ್ಲಿ ಕಾಣಬಹುದು. ಆದರೆ ಮಹಾಕಾವ್ಯವನ್ನು ರಚಿಸಿ ಖ್ಯಾತಿಯ ಶಿಖರವನ್ನೇರಿದ ನಂತರ ಚುಟುಕು ಸಾಹಿತ್ಯ ರಚಿಸಿದ ಪ್ರಪ್ರಥಮ ಮತ್ತು ಏಕೈಕ ಮಹಿಳಾ ಸಾಧಕಿ ಎಂದು ಡಾ. ಧರಣೀದೇವಿ ಮಾಲಗತ್ತಿ ಐ.ಪಿ.ಎಸ್. ಅವರ ಹೆಸರನ್ನು ದಾಖಲಿಸಿದರೆ ಅದು ಅತಿಶಯೋಕ್ತಿಯಾಗಲಾರದು ಎಂದಿದ್ದಾರೆ ಎಂ.ಜಿ.ಆರ್. ಅರಸ್. ಜೊತೆಗೆ ಸರಳತೆ, ಸಭ್ಯತೆ, ಸುಸಂಸ್ಕೃತಿಯ ಸಹೃದಯ ಸಾಹಿತಿ ಡಾ. ಧರಣೀದೇವಿ ಮಾಲಗತ್ತಿ ಅವರು ಚುಟುಕು ಸಾಹಿತ್ಯ ಸಾಮ್ರಾಜ್ಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ದರಿಂದ ಚುಟುಕು ಸಾಹಿತ್ಯಕ್ಕೆ ವಿಶೇಷವಾದ ಮಾನ್ಯತೆ, ಮನ್ನಣೆ, ಮೆಚ್ಚುಗೆ ದ್ವಿಗುಣಗೊಂಡಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿನ ಚುಟುಕುಗಳಲ್ಲಿ ಸರಳ ಭಾಷೆ, ಮತ್ತು ಲಾಲಿತ್ಯದ ಸಾಲುಗಳಿಂದ ಓದುಗರನ್ನು ಸೆಳೆಯುತ್ತವೆ.
©2024 Book Brahma Private Limited.