ಹನಿಗವನ ಸಾಹಿತ್ಯ ರಚನೆಯಲ್ಲಿ ಬಾಲಕೃಷ್ಣ ಬೇರಿಕೆ ಅವರು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. “ಹೆಸರಿರದ ಹೂವು’ ಹನಿಗವನಗಳ ಸಂಕಲನಕ್ಕೆ ಬೆನ್ನುಡಿ ಬರೆದ ತಮ್ಮ ಮಾತುಗಳಲ್ಲಿ ಪ್ರಸಾದ ಶಣೈ ಆರ್.ಕೆ. ಅಭಿಪ್ರಾಯಪಟ್ಟು: ಆಗತಾನೆ ಬಿದ್ದ ಮಳೆಯಂತೆ ಮೂಡಿದ ಆಸೆಗಳಿಗೆಲ್ಲ ಗಾಢವಾಗಿ ಸ್ಫೂರ್ತಿಯಾಗುವ ಇಲ್ಲಿಯ ಕೆಲ ಕವಿತೆಗಳು ನೇರಳೆಹಣ್ಣು ತಿಂದು ಮುಗಿದರೂ ನಾಲಗೆಯಲ್ಲಿ ಬಹಳ ಹೊತ್ತು ಉಳಿಯುವ ನೇರಳೆಯ ಬಣ್ಣ ಹಾಗೂ ಪರಿಮಳದಂತಿವೆ'ಎಂದಿದ್ದಾರೆ.
ಕವಿ ಬಾಲಕೃಷ್ಣ ಬೇರಿಕೆ “ನನ್ನ ಕವಿತೆ ಎಂದರೆ ನನ್ನೊಳಗೆ ಹೇಳದೇ ಉಳಿದ ನಿನ್ನ ಧ್ಯಾನ” ಎಂದೇ ಹನಿಗವನಗಳ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದು, ಓದುಗರನ್ನು ಹೊಸ ಆಲೋಚನೆಯತ್ತ ಸೆಳೆಯುವ ಸಾಮರ್ಥ್ಯ ಇಲ್ಲಿಯ ಸಾಹಿತ್ಯಕ್ಕೆ ಇದೆ.
©2025 Book Brahma Private Limited.