ಟಿಂ.ಟಿಂ. ಚುಟುಕು

Author : ಚಂದ್ರಗೌಡ ಕುಲಕರ್ಣಿ

Pages 48

₹ 15.00




Year of Publication: 1999
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 080 2216 1900

Synopsys

`ಟಿಂ.ಟಿಂ. ಚುಟುಕು'  ಮಕ್ಕಳ ಕವಿ ಚಂದ್ರಗೌಡ ಕುಲಕರ್ಣಿ ಅವರು ರಚಿಸಿದ್ದು, ಲಯಬದ್ಧವಾದ ಈ ಚುಟುಕುಗಳು ಓದಿಸಿಕೊಳ್ಳುತ್ತವೆ, ಓದುಗರನ್ನು ಪ್ರಶ್ನಿಸುತ್ತವೆ. ಅವರ ಜಾಣ್ಮೆಗೆ ಸವಾಲೊಡ್ಡುತ್ತವೆ. ಪ್ರಾಸಬದ್ಧವಾದ ಬಿಟ್ಟ ಪದವನ್ನುಓದುಗರೇ ತುಂಬಲು ಪ್ರೇರಣೆ ನೀಡುತ್ತವೆ.. ಚುರುಕು ಸ್ವಭಾವದ ಈ ಚುಕುಟುಗಳು ಕುತೂಹಲಕಾರಿಯಾಗಿವೆ. 

ಈ ಸಂಕಲನದಲ್ಲಿ 150 ಚುಟುಕುಗಳಿವೆ. ನಮ್ಮ ಪುರಾಣ ಜನಪದ ಶಿಕ್ಷಣ ಇತಿಹಾಸ ಭೂಗೋಲ ವಿಜ್ಞಾನ ಕ್ರೀಡೆ ಮುಂತಾದ ಅನೇಕ ವಿಷಯಗಳ ವೈವಿಧ್ಯತೆ ಇದೆ. ಸಾಮಾನ್ಯ ಜ್ಞಾನದ ಜೊತೆಗೆ ಭಾವಲೋಕ, ಭಾಷಾ ಲೋಕ,ಕಲ್ಪನಾ ಲೋಕವನ್ನು ವಿಸ್ತರಿಸುತ್ತವೆ. ಮಕ್ಕಳ ಚುಟುಕು ಸಾಹಿತ್ಯದಲ್ಲಿ ಇದೊಂದು ವಿನೂತನ ಪ್ರಯೋಗ. ತರಂಗ ವಾರಪತ್ರಿಕೆಯಲ್ಲಿ  ಸರಣಿಯಲ್ಲಿ ಪ್ರಕಟವಾಗಿವೆ. 

About the Author

ಚಂದ್ರಗೌಡ ಕುಲಕರ್ಣಿ

ಕವಿ, ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರು. ಹುಟ್ಟೂರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.   ಕಥೆ,ಕವನ,  ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ - ತೊಡಕಾಟ ಅಂಕ ಮೋಡಿಯಲ್ಲಿ ಬೆರೆತ ಮನಸಿಗೆ ಜನಪದ ಲೆಕ್ಕ - ಕವಡ ಕಂಟಗ ಲೆಕ್ಕ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ ಹೀಗೆ ವಿವಿಧ ವಲಯದಲ್ಲಿ ಆಸಕ್ತಿ. ದೂರದರ್ಶನದ ಬೆಳಗು ...

READ MORE

Related Books