‘ಕೇಶವ ನಾಮ ಚೈತನ್ಯ ಧಾಮ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಚುಟುಕುಗಳ ಸಂಕಲನ. ಈ ಕೃತಿಗೆ ಡಾ.ರಮಾನಂದ ಬನಾರಿ, ಡಾ.ಎಂ.ಜಿ.ಆರ್. ಅರಸ್ ಅವರ ಬೆನ್ನುಡಿ ಬರಹಗಳಿವೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ರಮೇಶ್ ಗುಬ್ಬಿ ಅವರು ಚಿಂತನಶೀಲ ಲೇಖಕರೆಂದು ಈಗಾಗಲೇ ಗುರುತಿಸಿಕೊಂಡಿದ್ದಾರೆ. ಎಡನೀರು ಶ್ರೀ.ಶ್ರೀ. ಶ್ರೀ ಪೀಠಾಧಿಪತಿಗಳಾದ ಶ್ರೀಕೇಶವಾನಂದಭಾರತಿ ಶ್ರೀಪಾದಂಗಳವರ ಪಾದ ಪದ್ಮಗಳನ್ನು ತಮ್ಮ ಅಂತರಂಗದಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡಿದ್ದಾರೆ. ಇಲ್ಲಿಯ ಚುಟುಕುಗಳಲ್ಲಿ ಭಕ್ತಿಭಾವದ ಬೆಸುಗೆಯ ಅನೂಹ್ಯ ಶಕ್ತಿ ಇರುವುದನ್ನು ಗಮನಿಸ ಬಹುದಾಗಿದೆ. ಚುಟುಕುಗಳಲ್ಲಿ ಅಸಂಖ್ಯ ಸೆಳೆತಗಳಿವೆ. ಸವಾಲುಗಳಿಗೆ, ಬೆರಗುಗೊಳಿಸುತ್ತದೆ.
ಉಪಮೇಯಗಳು ಕಲ್ಪನೆಗಳಿವೆ. ಜೀವ ತುಂಬಿ, ಆಹ್ಲಾದದ ಅನುಭವದ ಕಂಪನ್ನುಂಟು ಮಾಡುತ್ತದೆ. ಅಭಿಮಾನದ ಜೊತೆಗೆ ಹೆಮ್ಮೆ ಎನಿಸುತ್ತದೆ. ಅರ್ಥ ಪೂರ್ಣವಾಗಿದೆ ಎಂದಿದ್ದಾರೆ ಡಾ.ಎಂ.ಜಿ.ಆರ್. ಅರಸ್. ಜೊತೆಗೆ ಇಲ್ಲಿನ ಚುಟುಕುಗಳು ರೋಮಾಂಚನವನ್ನುಂಟು ಮಾಡುತ್ತವೆ. ರೋಚಕವು, ಭಕ್ತಿ ಪ್ರಧಾನವು, ಶರಣಾಗತಿಯ ನಡೆಯು, ಅರ್ಪಣೆಯ ವಿಧಾನವು, ಮನಮಿಡಿತಗಳು, ವೈಯಕ್ತಿಕ ತಲ್ಲಣಗಳು ಸ್ಪಷ್ಟವಾಗಿವೆ’ ಎಂದಿದ್ದಾರೆ.
©2025 Book Brahma Private Limited.