ಹಸಿದ ಮಗುವಿಗೆ ಕೊಡುವಳು ಕೈಯಲಿ ತಾಯಿ ಅನ್ನ ಜೊತೆಗೆ ಕೊಡುವಳು ಹೃದಯದಿ ತನ್ನ ಪ್ರೀತಿಯನ್ನ ಇಂತಹ ಚುಟುಕು ಕವನಗಳ ಸಂಕಲನ ’ಪಣಿ - ನಾಡಿ’. ವಾಸ್ತವ ಬದುಕಿನ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಘಟನೆಗಳ ಕುರಿತು ಸ್ಪಂದನಗಳು ಈ ಚುಟುಕು ಕವನಗಳಲ್ಲಿವೆ. ಸಮುದ್ರಕ್ಕೆ ಮಳೆ, ಕೊನೆಯುಸಿರು, ಮುಂತಾದ ಚುಟುಕು ಕವಿತೆಗಳು ಓದುಗನ ಗಮನ ಸೆಳೆಯುತ್ತವೆ. ಲೇಖಕರ ಬರಹದಲ್ಲಿ ವಿಜೃಂಭಣೆ ಇಲ್ಲ. ಅನ್ನಿಸಿದ್ದನ್ನು ಆಡು ಭಾಷೆಯಲ್ಲಿ, ಸರಳವಾಗಿ ಅರ್ಥಮಾಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
©2024 Book Brahma Private Limited.