ಈ ಚಳಿಗಾಲದಲ್ಲಿ ಅವಳು ಸಿಕ್ಕಿ..

Author : ಗೋಪಾಲಕೃಷ್ಣ ಕುಂಟಿನಿ

Pages 80

₹ 100.00




Year of Publication: 2020
Published by: ಸೀಮಾ ಬುಕ್ಸ್
Address: ನಂ.12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ 1ನೇ ಬ್ಲಾಕ್ ಪೂರ್ವ, ಬೆಂಗಳೂರು 560 001
Phone: 9036312786

Synopsys

ಲೇಖಕ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ ಕವನ ಸಂಕಲನ ‘ಈ ಚಳಿಗಾಲದಲ್ಲಿ ಅವಳು ಸಿಕ್ಕಿ’..ಪ್ರೇಮ , ಕಾಮ , ವಿರಹ ಮತ್ತು ದಾರ್ಶನಿಕತೆಯ ಹದವಾದ ಮಿಶ್ರಣ ಈ ಕವನ ಸಂಕಲದಲ್ಲಿದ್ದು, 230 ಬಿಡಿ ಹಿ ಕವನಗಳಿವೆ. ಈ ಸಂಕಲನಕ್ಕೆ ಸಾಹಿತಿ ಜೋಗಿ ಅವರು ಮುನ್ನುಡಿ ಬರೆದಿದ್ದು, ‘ಕತ್ತಲಲ್ಲಿ ಛಕ್ಕನೆ ಮಿನುಗಿ ಮರೆಯಾಗುವ ಮಿಂಚುಹುಳಗಳ ಬೆಳಕಿನಂಥ ಸಾಲುಗಳು , ಹನಿಗವಿತೆ ಎಂದು ಕರೆಯಲು ನಾನು ಇಷ್ಟಪಡದ , ಕವಿತೆ ಎಂದು ಕರೆಯಲಾಗದ , ತತ್ವಜ್ಞಾನ , ಪ್ರೇಮ , ಕಾಮ , ವಿರಹ ಮತ್ತು ದಾರ್ಶನಿಕತೆ ಹದವಾಗಿ ಬೆರೆತಿರುವ ಸ್ಕಾಚ್ ವಿಸ್ಕಿಯ ಬಿಂದುವಿನ ಹಾಗೆ ನನ್ನಲ್ಲಿ ಘಮ , ರುಚಿ ಮತ್ತು ಹಿತವಾದ ಮತ್ತನ್ನು ಉಳಿಸಿರುವ ಈ ಸಾಲುಗಳನ್ನು ನಾನು ಹಾಯ್ದುಗಳಂತೆ , ಝನ್ ಜ್ಞಾನೋದಯದಂತೆ , ನೀಲು ಕೊಟ್ಟ ಸಾಲುಗಳಂತೆ ಓದಿಕೊಂಡೆ . ಆದರೆ , ಇವು ಅವ್ಯಾವುವೂ ಅಲ್ಲ . ಗೋಪಾಲಕೃಷ್ಣ ಎಂಬ ಉಪ್ಪಿನಂಗಡಿಯ ಕಡು ವ್ಯಾಮೋಹಿ ತನ್ನ ಏಕಾಂತದಲ್ಲಿ ತೊಟ್ಟುಕೊಟ್ಟ ಸಾಂಗತ್ಯದ ಪರಿಮಳದ ಗಳಿಗೆಗಳಿಂದ ಮೂಡಿದ ಪದಚಿತ್ತಾರ . ನಾನಿವನ್ನು ವಿವರಿಸಲು ಹೋಗುವುದಿಲ್ಲ . ಮುಟ್ಟಿದರೆ ಮಾಸುವ ಮಂಜುಹನಿಯಂಥ ಈ ಕವಿಸಾಲುಗಳು ಅವರವರ ಕೆನ್ನೆಯ ರೋಮಾಂಚಕ್ಕೆ ಕಾರಣವಾಗಬೇಕು . ಮೇಲಿನ ಮೂರು ಚಿಟ್ಟೆಯಂಥ ಪದ್ಯಗಳೇ ಅದಕ್ಕೆ ಸಾಕ್ಷಿ’ ಎಂದಿದ್ದಾರೆ.

About the Author

ಗೋಪಾಲಕೃಷ್ಣ ಕುಂಟಿನಿ

ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು  “ವೃತ್ತಾಂತ ಶ್ರವಣವು”,  “ಆಮೇಲೆ ಇವನು”, ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’, “ವಿಲೇಜ್ ವರ್ಲ್ಡು ಮತ್ತು 24 ಕತೆಗಳು”, “ಮಾರಾಪು”ಎಂಬ ಕತೆಗಳ ಸಂಕಲನ ಮತ್ತು “ಈ ಚಳಿಗಾಲದಲ್ಲಿ ಅವಳು ಸಿಕ್ಕಿ” ಎಂಬ ಕವನ ಸಂಕಲನ  ಪ್ರಕಟಿಸಿದ್ದಾರೆ. “ಪುರುಷಾವತಾರ” ಅವರ ಕಾದಂಬರಿ. “ವಂಡರ್ ವೈ ಎನ್ ಕೆ” ಮತ್ತು “ಮಳೆಯಲ್ಲಿ ನೆನೆದ ಕತೆಗಳು” ಅವರ ಸಂಪಾದಿತ ಕೃತಿಗಳು.  ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್‌ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ...

READ MORE

Related Books