‘ಆಕಾಶಕ್ಕೊಂದು ಏಣಿ’ ಶಿಲ್ಪಾ ಮ್ಯಾಗೇರಿಯವರ ಚುಟುಕು ಸಂಕಲನವಾಗಿದೆ. ಇದಕ್ಕೆ ಎ.ಎಸ್. ಮಕಾನದಾರ ಅವರ ಬೆನ್ನುಡಿ ಬರಹವಿದೆ; ಆಕಾಶಕ್ಕೊಂದು ಏಣಿ ಹಾಕಿ ಓದುಗ ಪ್ರಭು ಜಾರದಂತೆ, ಒಂದೊಂದು ಚುಟುಕು ಕಾವ್ಯವೂ ಗಂಭೀರ ವಸ್ತುವಿಷಯವನ್ನೊಳಗೊಂಡು ಭಾಷೆಯಲ್ಲಿ ಸರಳತೆ, ವಿಚಾರ ಸ್ಪಷ್ಟತೆ, ಅಭಿವ್ಯಕ್ತಿಯ ಸೌಂದರ್ಯ ಶಿಲ್ಪಾರವರ ಚುಟುಕುಗಳಲ್ಲಿ ಕಾಣಬಹುದು. ಕೃತ್ರಿಮತೆ ಇಲ್ಲದ ಕಾವ್ಯದ ವಸ್ತು ನನಗೆ ಇಷ್ಟವಾಗಿದೆ. ಹೊಸ ಉಪಮೆಗಳೊಂದಿಗೆ ಕಾವ್ಯಕುಸುರಿ ಹೆಣೆಯಲು ಪ್ರಯತ್ನಿಸುತ್ತಿರುವ ಮಹಿಳೆಯರ ವಿವಿಧ ಆತಂಕ, ತಲ್ಲಣ, ತಳಮಳಗಳಿಗೆ ಕಾವ್ಯದ ಮುಲಾಮು ಸವರಲು ಯತ್ನಿಸಿದ ಕವಯಿತ್ರಿ ಶಿಲ್ಪಾ ಮ್ಯಾಗೇರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
©2025 Book Brahma Private Limited.