ಬೀchi ಅವರು ಚುಟುಕು ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಹಾಸ್ಯಕ್ಕೂ ಚೌಪದಿಗಳಿಗೂ ಒಂದು ಬಗೆಯ ನಂಟಿದೆ. ಅದೂ ಕೂಡ ಬೀಚಿ ಅಂತಹ ಸಾಹಿತಿಗಳು ಚುಟುಕು ಸಾಹಿತ್ಯ ರಚನೆಗೆ ಪ್ರೇರಣೆ ಒದಗಿಸಿರಬಹುದು. ಮತ್ತೊಂದೆಡೆ ಡಿವಿಜಿ, ಜಿ ಪಿ ರಾಜರತ್ನಂ ಹಾಗೂ ದಿನಕರ ದೇಸಾಯಿ ಚೌಪದಿಗಳನ್ನು ಬರೆದು ಜನಪ್ರಿಯವಾದದ್ದೂ ಇದಕ್ಕೆ ಕಾರಣವಿರಬಹುದು. ಗಣ, ಛಂದಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳದೆ ಆನೆ ಓದಿದ್ದೆ ಹಾದಿ ಎಂಬಂತೆ ಬರೆದ ಚೌಪದಿಗಳ ಸಂಗ್ರಹ ತಿಂಮ ಕೃತಿ. ಹಾಗೆ ಬರೆದ ಕಾರಣಕ್ಕೆ ಇತರೆ ಚೌಪದಿ ಕವಿಗಳಿಗಿಂತಲೂ ಇವರು ಭಿನ್ನವಾಗಿ ಕಾಣುತ್ತಾರೆ.
©2025 Book Brahma Private Limited.