ಚಿಕ್ಕ ದೇವರಾಜ ಒಡೆಯರಿಗೆ ಮೈಸೂರಿನ ಆಡಳಿತಲ್ಲಿ ವಿಶಿಷ್ಟ ಸ್ಥಾನವಿದೆ. ಮೈಸೂರು ಒಡೆಯರ ಇತಿಹಾಸದಲ್ಲಿ ಕ್ರಿ.ಶ 1672 ರಿಂದ 1704ರವರೆಗೆ ಆಳ್ವಿಕೆ ನಡೆಸಿದ ಚಿಕ್ಕದೇವರಾಜ ಒಡೆಯರು , ಎಲ್ಲಾ ಕಾಲಘಟ್ಟದಂತೆ ಆಗಲೂ ಇದ್ದ ರಾಜಕೀಯ ಯುದ್ಧದ ನಡುವೆಯೂ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಗಳಿಗೆ ಅಪಾರವಾಗಿ ಪ್ರೋತ್ಸಾಹ ನೀಡುತಿದ್ದರು. ಸ್ವತಃ ಕವಿಯೂ, ಸಾಹಿತ್ಯ ಪೋಷಕರೂ ಆಗಿದ್ದ ಚಿಕ್ಕದೇವರಾಯರ ಬಗ್ಗೆ ಆತನ ಸ್ವಂತ ಆಸ್ಥಾನದಲ್ಲೇ ಇದ್ದ ಕವಿ ತಿರುಮಲರಾಯರು ಈ ಕೃತಿಯನ್ನು ರಚಿಸಿದ್ದಾರೆ. ಹಳಗನ್ನಡ ಸಾಹಿತ್ಯದ ಈ ಕೃತಿಯನ್ನು ನಾಗರಾಜ್ ರಾವ್‌ರವರು ಬಲು ಎಚ್ಚರಿಕೆಯಿಂದ ಮೂಲ ವಾಸ್ತವಕ್ಕೆ ಧಕ್ಕೆ ಬರದಂತೆ, ಯಾವುದೇ ಅರ್ಥ ವ್ಯತ್ಯಾಸವಾಗದಂತೆ ಕೃತಿಯ ವಸ್ತು ಮತ್ತು ವ್ಯಾಕರಣಕ್ಕೆ ಧಕ್ಕೆ ಬಾರದಂತೆ ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.