ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಿರಿಯಹಟ್ಟಿಯವನಾದ ಅಯ್ಯಪ್ಪ ಕವಿ ತನ್ನ ಗುರುವಾಗಿದ್ದ ಮತ್ತು ಈ ಪ್ರದೇಶದ ಬಹಳ ಪ್ರಸಿದ್ಧ ಅವಧೂತ ಆಗಿದ್ದ ಚಿದಾನಂದಾವ ಧೂತರನ್ನು ಕುರಿತು ರಚಿಸಿದ ಕಾವ್ಯ ಇದಾಗಿದೆ. ಈ ಕೃತಿಯ ಕರ್ತೃ ಅಯ್ಯಪ್ಪಕವಿ ಚಿದಾನಂದಾವ ಧೂತನ ಶಿಷ್ಯ ಮತ್ತು ಅವರ ಪರಿಸರದಲ್ಲಿಯೇ ಹುಟ್ಟಿ ಬೆಳೆದವನಾಗಿದ್ದು ಹೀಗಾಗಿಯೇ ಹೆಚ್ಚುಅಧಿಕೃತವಾಗಿ ಚಿದಾನಂದಾವಧೂತರ ಬಾಲ್ಯ, ಕ್ಷೇತ್ರಸಂಚಾರ, ಸದ್ಗುರು ಕಟಾಕ್ಷ, ಹಠಯೋಗ, ರಾಜಯೋಗ ಹಾಗೂ ಕಾಶೀ ಯಾತ್ರೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ವೇದಾಂತ ವಿಷಯಗಳನ್ನೊಳಗೊಂಡ ಕೃತಿ ರಚನೆ ಮಾಡಿದ್ದು ಚಿದಾನಂದಾವಧೂತರ ಜೀವನ ಚರಿತ್ರೆಯ ಹಿಂದೆ ಅನುಭವ ಮತ್ತು ಅನುಭಾವಗಳು ಸಮಪ್ರಮಾಣದಲ್ಲಿ ಬೆರೆತುಕೊಂಡಿವೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅವಧೂತ ಪರಂಪರೆಯ ದೃಷ್ಟಿಯಿಂದ ಚಿದಾನಂದಾವಧೂತರ ಚಾರಿತ್ರ' ಕೃತಿಗೆ ಸಾಂಸ್ಕೃತಿಕ ಮಹತ್ವವಿದೆ. ಈ ಸಂಪುಟದಲ್ಲಿರುವ ಅಧ್ಯಾಯಗಳೆಂದರೆ: ಬಾಲ್ಯ ವಿವರ , ಕ್ಷೇತ್ರ ಸಂಚಾರ , ಸದ್ಗುರು ಕಟಾಕ್ಷ ,ಹಠಯೋಗ , ರಾಜಯೋಗ , ಕಾಶಿಯಾತ್ರೆ , ಅವಧೂತ ಚಾರಿತ್ರ 2
©2024 Book Brahma Private Limited.