ಬಾಲ್ಯದ ನೆನಪುಗಳನ್ನು ಸಂಗೀತದ ಸ್ವರಗಳಂತೆ ಸಹೃದಯನ ಮುಂದಿರಿಸಿದ್ದಾರೆ ನಿಮ್ಮ ಕೈಲಿರುವ 'ಬಾಲ್ಯದ ನನ್ನೂರಿಗೊಂದು ಪಯಣ' ಕೃಷಿಯ ಮೂಲಕ ಇದು ಕೇವಲ ಪರಿಚಯಾತ್ಮಕ, ಮತ್ತು ಮದುಕಾರದ ಬರಹದಲ್ಲ, ಇಲ್ಲಿ ತನ್ನೂರಿನ ಹೆಚ್ಚುಗಾರಿಕೆಯ ಚಿತ್ರಣವಿದೆ. ಅದೇ ವೇಳೆ ಗ್ರಾಮವೊಂದರಲ್ಲಿನ ದೌರ್ಬಲ್ಯಗಳನ್ನೂ ಹೇಳಿದ್ದಾರೆ. ಬಾಲ್ಯದ ಅನುಭವಗಳನ್ನು ಕಡೆದಿರಿಸಿದ್ದಾರೆ. ಹಾಗೆಯೇ ಊರೆಂದರೆ ಅಲ್ಲಿನ ಜನ, ಜಾತಿ, ಆಚರಣೆ, ನಂಬಿಕೆಗಳು, ಅದರಲ್ಲಿ ತಮ್ಮ ಪಾಲುದಾರಿಕೆ ಎಲ್ಲವನ್ನೂ ದಾಖಲಿಸಿದ್ದಾರೆ. ತಮ್ಮನುಭವಗಳಿಗೆ ಬಿಟರರಿ ಟಚ್ ಕೊಟ್ಟು ಸುಂದರವಾದ ಗ್ರಾಮಚಿತ್ರಣವನ್ನು ಕಟ್ಟಿಕೊಟ್ಟಿರುವುದು ವಿಶೇಷವೇ ಸರಿ, ತಮಗಾದ ಕಹಿನೆನಪುಗಳನ್ನು ಚಿರಂಜೀವ ಎಂದಿದ್ದಾರೆ. ಅಕ್ಕನ ಮದುವೆ, ದೆವ್ವದ ಕತೆಗಳು, ಆಂಧ್ರದ ನಾಟಕಗಳು, ನಾಟಕ ಮ೦ಡಳಿ, ಕುಟುಂಬದ ವಿವರಗಳು, ಹಬ್ಬ ಆಚರಣೆಗಳನ್ನು ವಿಶ್ವತವಾಗಿ ಹೇಳುತ್ತಾ ಮಾನಸಿಕ ದೂರವನ್ನು ಕಾಯ್ದುಕೊಂಡು ಅಪರೂಪದ ವಿವರಣಾತ್ಮಕ ಹೊತ್ತಗೆಯನ್ನು ಕನ್ನಡದ ಓದುಗರಿಗೆ ಕೊಟ್ಟಿದ್ದಾರೆ ಎಂದು ಎಂ. ಬೈರೇಗೌಡ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.