ಕಲ್ಪವೃಕ್ಷದ ಜಾಡು ಹಿಡಿದು

Author : ಎಚ್.ಆರ್‌. ಕೃಷ್ಣಮೂರ್ತಿ

Pages 176

₹ 104.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಡಾ. ಎಚ್.ಆರ್. ಕೃಷ್ಣಮೂರ್ತಿ ಬರೆದ ಕೃತಿ-ಕಲ್ಪವೃಕ್ಷದ ಜಾಡು ಹಿಡಿದು. ತೆಂಗಿನ ಮರವನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತಿದೆ. ಈ ವೃಕ್ಷದ ಪ್ರತಿ ಭಾಗವೂ ಮನುಷ್ಯನಿಗೆ ಪ್ರಯೋಜನಕಾರಿ. ಇಷ್ಟೊಂದು ಪ್ರಯೋಜನಕಾರಿ ಯಾಗಿರುವ ಗಿಡ ಮತ್ತೊಂದಿಲ್ಲ. ಆದ್ದರಿಂದಲೇ, ಭಾವನಾತ್ಮಕವಾಗಿ ತೆಂಗಿನ ಮರನ್ನು ಕಲ್ಪವೃಕ್ಷ ಎಂದು ಕರೆದಿರುವುದು ಸಮಜಂಸವೇ ಆಗಿದೆ. ಕಲ್ಪವೃಕ್ಷದ ಎಳನೀರು, ತೆಂಗು, ಕೊಬ್ಬರಿ, ನಾರು, ಗರಿಗಳು ಹೀಗೆ ಪ್ರತಿಯೊಂದರ ಉಪಯುಕ್ತತೆಯನ್ನು ಇಲ್ಲಿ ವಿವರಿಸಲಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ( 2008) ಲಭಿಸಿದೆ.

About the Author

ಎಚ್.ಆರ್‌. ಕೃಷ್ಣಮೂರ್ತಿ

ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಹೆಚ್ಚುವರಿ ಮಹಾನಿದೇಶಕರಾಗಿ ಸೇವೆ ಸಲ್ಲಿಸಿದ ಎಚ್.ಆರ್. ಕೃಷ್ಣಮೂರ್ತಿ ಅವರು ವಿಜ್ಞಾನ ಲೇಖಕರು. ಕಲ್ಪವೃಕ್ಷದ ಜಾಡು ಹಿಡಿದು, ಪರಿಸರ, ನಮ್ಮ ಮರಗಳು ಇವರ ಕೃತಿಗಳು. ಡಾ. ಉಲ್ಲಾಸ ಕಾರಂತ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ‘ಹುಲಿಯ ಬದುಕು’ ಶೀರ್ಷಿಕೆಯಡಿ ಈ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ.  ವಿಜ್ಞಾನ ಸಾಹಿತ್ಯ ಪ್ರಶಸ್ತಿ, ಶ್ರೇಷ್ಠ ವಿಜ್ಞಾನ ಲೇಖಕ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ವಿಜ್ಞಾನ ಸಂವಹನ ಪ್ರಶಸ್ತಿ, ಜೀವಮಾನ ಸಾಧನೆಯ ಪ್ರಶಸ್ತಿ ಲಭಿಸಿವೆ.  ...

READ MORE

Awards & Recognitions

Related Books