''ಹದಿ ಹರೆಯದ ಹಾದಿ'ಯಲ್ಲಿ ಶಿಶಿಲರ ನಾಲ್ಕನೇ ವರ್ಷವಿಂದ ಹಿಡಿದು ಹದಿನೆಂಟರ ವರೆಗಿನ ನೆನಪುಗಳಿವೆ ಅವರ ಬದುಕಿನ ಈ ದಿನಗಳು ಕಲ್ಲುಮುಳ್ಳಿನ ಹಾದಿಯ ಬಹಳ ಸಂಕಷ್ಟದ ದಿನಗಳು. ಈ ಕಥನಕ್ಕೆ ಮೂಲ ಪ್ರೇರಣೆ ಅಮೆರಿಕನ್ ಲೇಖಕಿ ಲಾರಾ ಇಂಗಲ್ಸ್ ವೈಲ್ಡ್ರಳ ಎಂಟು ಅನುಭವ ಕಥನಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ಕೇವಲ ವೈಯಕ್ತಿಕ ಅನುಭವಗಳ ಕಷ್ಟ ಕಾರ್ಪಣ್ಯಗಳ ನಿವೇದನೆಯಷ್ಟೇ ಆಗದೆ ಇನ್ನಿತರ ಆಯಾಮಗಳನ್ನು ಪಡೆದಿರುವುದು ಈ ಕೃತಿಯ ವಿಶೇಷತೆ. ಇಲ್ಲಿ ಭಾವಮಯವಾದ, ಹೃದಯಂಗಮವಾದ, ಕಂಬನಿ ತುಳುಕಿಸುವಂಥ ಅನೇಕ ಸಾಲುಗಳೂ ಸಂದರ್ಭಗಳೂ ಇರುವಂತೆಯೇ ತಡೆಯಿಲ್ಲದಂತಹ ನಗುವನ್ನು ಉಕ್ಕಿಸುವ ಪ್ರಸಂಗಗಳೂ ವಿಪುಲವಾಗಿವೆ. ಶಿಶಿಲ ಪರಿಸರದ ಕಾಡು, ನದಿ, ಹೊಳೆ, ಬೆಟ್ಟಗುಡ್ಡ, ಪ್ರಾಣಿ ಪಕ್ಷಿಗಳ ವೈವಿಧ್ಯ, ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಬದುಕು, ಆಚಾರ ವಿಚಾರಗಳು, ಆಹಾರ ವಿಶೇಷಗಳ ವಿವರಗಳು ಈ ಕಥನಕ್ಕೆ ಪ್ರಾದೇಶಿಕತೆಯ ಸತ್ವವನ್ನು ತುಂಬಿವೆ. ಸಾಂಧಾರ್ಭಿಕವಾಗಿ ದಾಖಲಾಗಿರುವ ಸ್ಥಳ ಪುರಾಣಗಳು, ಐತಿಹ್ಯಗಳು ನಮ್ಮ ಜನಪದ ಕಲ್ಪನಾ ಸಾಮರ್ಥ್ಯ ಹಾಗೂ ಜಾಣೆಗೆ ಸಾಕ್ಷಿಯಂತಿವೆ ಎನ್ನುತ್ತಾರೆ ಕೆ.ಆರ್. ಸಂಧ್ಯಾ ರೆಡ್ಡಿ.
©2025 Book Brahma Private Limited.