ಮರಗೊಟರು ಬಹಳ ವಿಶೇಷವಾದ ಹೆಸರು. ಮರಕುಟುಕ ಹಕ್ಕಿಯೊಂದು ತನ್ನ ಆಹಾರಕ್ಕಾಗಿ ಮರಗಳ ಒಳ ತೊಗಟೆಗಳ ಕೊರೆವ ಒಂದು ಜತನ ಕಾಯಕದಿಂದ ತನ್ನ ಆಹಾರದ ಕೊರತೆ ನೀಗಿಸಿಕೊಂಡ ತರುವಾಯ ತಾನು ಕೊರೆದಗೊಟರು ಮತ್ತಾವುದೋ ಹಕ್ಕಿಗೆ ವಾಸ ನೆಲೆಯಾಗಿ ಖಗ ಸಂತಾನದ ಪೋಷಣೆಯ ತಾಣವಾಗುವುದು ಬಲು ವಿಶೇಷ. ಗೆಳತಿ ಭಾರತಿ ಹಾದಿಗೆಯವರು ಹಳೆಯ ಮಲೆನಾಡಿನ ಜೀವನ ವಿಧಾನದ ಸುಂದರ ಸುಂದರವಾಗಿ ಚಿತ್ರಣವನ್ನು ಪರಿಚಯಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಇವರಿಂದ ಇನ್ನೂ ಹತ್ತು ಹಲವು ಕೃತಿಗಳು ಓದುಗರ ಕೈ ಸೇರಲಿ ಎಂದು ಆಶಿಸುತ್ತೇನೆ ಎಂದು ರಾಜೇಶ್ವರಿ ಹುಲ್ಲೇನಹಳ್ಳಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.