‘ಹುಲಿಯು ಪಂಜರದೊಳಿಲ್ಲ’ ಲೇಖಕ ಟಿ.ಎಸ್. ವಿವೇಕಾನಂದ ಅವರ ಕೃತಿ. ಬೆರಗಿನ ಲೋಕದೊಂದಿಗೆ ನಡೆಸಿದ ಸಂದರ್ಶನ ನಡೆಸುವಂತಿದೆ. ಪರಿಸರ ವಿನಾಶದ ಪಾಪ ಮಾನವ ನನ್ಕು ತಟ್ಟುತ್ತಿದೆ. ಒಂದು ಸಲ ಪ್ರಕೃತಿ ತಿರುಗಿ ನಿಂತಿತೆಂದರೆ ಸಾವು ಯಾರನ್ನಾದರೂ ಯಾವಾಗ ಬೇಕಾದರೂ ತೆಗೆದುಕೊಂಡು ಹೋಗಬಹುದು. ಸಾವಿಗೆ ಬಲಿಯಾಗಬೇಕಾದವರ ಪೈಕಿ ಮೊದಲು ನಾವೇ ಆಗಿರಬಹುದು. ಇಂತಹ ಎಚ್ಚರಿಕೆಯ ಗಂಟೆಯಾಗಿ ಈ ಕೃತಿ ವಿವೇಚನಾ ಪೂರ್ಣವಾಗಿದೆ. ಪರಿಸರ ರಕ್ಷಣೆಯ ಬಗೆಗಿನ ನಮ್ಮ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಪರಿಣಾಮಕಾರಿಯಾಗಿದೆ. ಪರಿಸರ ಪ್ರೇಮದ ನಾಟಕವಾಡುತ್ತಾ ಪರಿಸರ ಹಾಗೂ ವನ್ಯಜೀವಿ ರಕ್ಷಕರೆಂದು ಕರೆದುಕೊಳ್ಳುವವರ ನಿಜ ಬಣ್ಣಗಳನ್ನೂ ಈ ಕೃತಿ ಬಿಚ್ಚಿ ತೋರಿಸುತ್ತಿದೆ.
©2024 Book Brahma Private Limited.