ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರ ಕೃತಿ-ವನಸಿರಿ. ಭಾರತ ದೇಶದಲ್ಲಿ ಕರ್ನಾಟಕ ಭೂ ಪ್ರದೇಶವು ಅರಣ್ಯದಿಂದ ಸಮೃದ್ಧವಾಗಿದೆ. ಪಶ್ಚಿಮ ಘಟ್ಟಗಳು ಅರಣ್ಯ ಪ್ರದೇಶಕ್ಕೆ ಕಿರೀಟವಿಟ್ಟಿವೆ. ಮಾತ್ರಬವಲ್ಲ; ಇಲ್ಲಿ ಗಂಧದದ ಮರಗಳು ವಿಶೇಷವಾಗಿವೆ. ಈ ಅರಣ್ಯ ಪ್ರದೇಶವು ದೇಶದ ಇತರೆ ಅರಣ್ಯ ಪ್ರದೇಶಗಳಿಂದ ವಿಭಿನ್ನವಾಗಿಸುತ್ತದೆ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಅರಣ್ಯಗಳ ಬೃಹದಾಕಾರದ ವೃಕ್ಷಗಳು, ಪರ್ಣಪಾತಿ ಕಾಡುಗಳ ಉತ್ತಮ ಚೌಬೀನೆ ಮರಜಾತಿಗಳು, ಅಮೂಲ್ಯ ಫಸಲುಗಳ ಗಿಡಮರಗಳು, ಬಿದಿರು, ಕಾನಿನ ಬೆತ್ತ, ಗಿಡಮೂಲಿಕೆಗಳು ಕರ್ನಾಟಕ ಅರಣ್ಯ ಪ್ರಧೇಶದ ವೈಶಿಷ್ಟ್ಯಗಳಾಗಿವೆ. ಕರ್ನಾಟಕದ ವೃಕ್ಷಜಾತಿಗಳ ನೆಲೆ, ಆಕಾರ, ಋತುಘಟನೆ, ಉಪಯುಕ್ತತೆ, ಸ್ವಾಭಾವಿಕ ಪುನರುತ್ಪನ್ನದ ಸ್ಥಿತಿಗತಿ, ಕೃತಕ ಪುನರುತ್ಪನ್ನದ ಸಾಧ್ಯತೆ ಇವುಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ವೃಕ್ಷಸಂಪತ್ತು ‘ವನಸಿರಿ’ಯ ಮುಖ್ಯ ಅಂಶವಾಗಿದ್ದರೆ, ‘ಮೃಗಸಂಪತ್ತು’ ವೃಕ್ಷಗಳೇ ಕಲ್ಪಿಸಿಕೊಟ್ಟ ಪರಿಸರದಲ್ಲಿ ಕಾಣಬರುವ ವನಸಿರಿಯ ಪೂರಕ ಅಂಶ. ಕರ್ನಾಟಕದ ಪರಿಚಿತ ವನ್ಯಮೃಗಗಳೊಂದಿಗೆ ಇನ್ನಿತರ ಅಪರಿಚಿತ ಮೃಗಗಳ ವಿವರಣೆ ನೀಡಲಾಗಿದೆ. ಹಿಂದೆ ನಡೆಯುತ್ತಿದ್ದ ಹುಲಿಯ ಬೇಟೆ, ಆನೆಯ ‘ಖೆಡ್ಡ’ ಇವುಗಳ ವಿವರಣೆಯನ್ನು ಚಾರಿತ್ರಿಕ ಕುತೂಹಲತೆಗಾಗಿ ಕೊಡಲಾಗಿದೆ. ಕರ್ನಾಟಕ ಅರಣ್ಯ ಪ್ರದೇಶವು ತನ್ನ ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತದೆ.
©2025 Book Brahma Private Limited.