ಹುತ್ತದ ಸುತ್ತಮುತ್ತ

Author : ಗುರುರಾಜ್ ಸನಿಲ್

Pages 116

₹ 100.00




Year of Publication: 2016
Published by: ಗೀತಾ ಪ್ರಕಾಶನ
Address: # ಸಂತೋಷನಗರ, ಅಟ್ಟೂರು, ಯಲಹಂಕ, ಬೆಂಗಳೂರು-560044

Synopsys

ಉರಗತಜ್ಞ ಗುರುರಾಜ್ ಸನಿಲ್ ಅವರ ಕೃತಿ-ಹುತ್ತದ ಸುತ್ತಮುತ್ತ. ಸಣ್ಣ ಸಣ್ಣ ಕ್ರಿಮಿ-ಕೀಟಗಳು ಹುತ್ತದ ಸುತ್ತಮುತ್ತ ಇದ್ದು, ನೋಡಲು ಸಿಗುತ್ತವೆ. ಹುತ್ತದ ತಾಣವು ಇವುಗಳ ವಾಸಸ್ಥಾನಕ್ಕೆ ಪೂರಕ ವಾತಾವರಣ ನಿರ್ಮಿಸಿರುತ್ತದೆ. ಹಾವು ಕೆಟ್ಟದ್ದೆಂದು ಹುತ್ತವನ್ನು ನಾಶ ಪಡಿಸುತ್ತಾ ಹೋದರೆ, ಅದರ ಸುತ್ತಮುತ್ತ ಇರುವ ಅಸಂಖ್ಯ ಕ್ರಿಮಿ-ಕೀಟಗಳೂ ಸಾಯುತ್ತವೆ. ಇವುಗಳ ಇರುವಿಕೆಗೆ ಈ ಹುತ್ತಗಳು ಭದ್ರತೆಯನ್ನು ತಂದುಕೊಡುತ್ತವೆ. ಹುತ್ತ ಇರದಿದ್ದರೆ ಈ ಕ್ರಿಮಿ ಕೀಟಗಳ ತಾಣಕ್ಕೆ ಹತ್ತು ಹಲವು ರೀತಿಯಲ್ಲಿ ಅಭದ್ರತೆ ಕಾಡುತ್ತವೆ. ಇಂತಹ ಸಂಗತಿಗಳ ಹಾಗೂ ಪರಿಸರ ಸ್ನೇಹಿ ಅಂಶಗಳ ಕುರಿತು ಜನಮಾನಸದಲ್ಲಿ ಜಾಗೃತಿ ಮೂಡಿಸುವ ಕೃತಿ ಇದು.

About the Author

ಗುರುರಾಜ್ ಸನಿಲ್
(14 June 1968)

ಲೇಖಕ ಗುರುರಾಜ್ ಸನಿಲ್ ಅವರು ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆಯವರು. ತಂದೆ ಶೇಷಪ್ಪ,  ತಾಯಿ ಸುಂದರಿ. ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು. ಹವ್ಯಾಸದೊಂದಿಗೆ ಇವರ ಉರಗ ತಜ್ಞರು. 25 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ದಾಖಲೆ ಇವರದ್ದು. ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿ, ಕಾವು ನೀಡಿ ಮರಿಗಳನ್ನು ಮಾಡಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟ ಪ್ರಸಂಗಗಳೂ ಇವೆ. "ನಮ್ಮ ಮನೆ ನಮ್ಮ ಮರ  ಸಂಸ್ಥೆಯೊಂದಿಗೆ ಈವರೆಗೆ 10ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ.  ಕೃತಿಗಳು:  ಹಾವು ನಾವು , ಹಾವು ನಾವು, ದೇವರ ಹಾವು : ನಂಬಿಕೆ ...

READ MORE

Related Books